ಹೊಸದಿಗಂತ ಚಿತ್ರದುರ್ಗ:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಗನ ಬಂಧನವಾದ ಸುದ್ದಿ ತಿಳಿದ ಆರೋಪಿಯ ತಂದೆ ಚಂದ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ರೇಣುಕಾಸ್ವಾಮಿ ಕೊಲೆಯ ಕೇಸಲ್ಲಿ 7 ನೇ ಆರೋಪಿಯಾಗಿ ಅನುಕುಮಾರ್ ಬಂಧಿಯಾಗಿದ್ದು ಚಿತ್ರದುರ್ಗ ನಗರದ ಸಿಹಿನೀರು ಹೊಂಡ ಬಡಾವಣೆಯ ಮನೆಯಲ್ಲಿ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತೀವ್ರ ಹೃದಯಾಘಾತದಿಂದ ಅಸ್ವಸ್ಥಗೊಂಡ ಅವರನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಲೋ ಬಿಪಿಯಿಂದ ಹೃದಯಾಘಾತವಾಗಿದ್ದು, ಚಿಕಿತ್ಸೆ ಪಲಿಸದೆ ಚಂದ್ರಪ್ಪ ಸಾವನ್ನಪ್ಪಿದ್ದಾರೆ.
ಕೊಲೆ ಪ್ರಕರಣದಲ್ಲಿ ಮಗ ಜೈಲು ಪಾಲಾದರೆ, ವಿಷಯ ತಿಳಿದ ತಂದೆ ಸಾವಿನ ಮನೆ ಸೇರುವಂತಾಗಿದೆ. ಇದರಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.