ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ನಡೆದ ಜಾಗವಾದ ಪಟ್ಟಣಗೆರೆ ಶೆಡ್‌ಗೆ ಇದೀಗ ಬೀಗ ಬಿದ್ದಿದೆ. ಫೈನಾನ್ಸ್ ನಲ್ಲಿ ಹಣ ಕಟ್ಟದೇ ಸೀಜ್ ಆದ ವಾಹನಗಳನ್ನಬಿಡಿಸಿಕೊಳ್ಳಲು ನಿತ್ಯ ಜನ ಶೆಡ್‌ಗೆ ಬರ್ತಿದ್ದಾರೆ. ಆದ್ರೆ ವಾಹನಗಳನ್ನ ಬಿಡಿಸಿಕೊಳ್ಳಲಾಗದೇ ವಾಪಾಸ್ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯದ ಜನ್ರನ್ನ ಬೆಚ್ಚಿಬೀಳಿಸಿದೆ. ಬೆಂಗಳೂರಿನ ಆರ್‌ಆರ್ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿತ್ತು. ಸದ್ಯ ಶೆಡ್‌ಗೆ ಬೀಗ ಬಿದ್ದಿದೆ ಎನ್ನಲಾಗಿದ್ದು, ಕೆಲವು ದಿನಗಳ ನಂತರ ಶೆಡ್ ತೆರೆಯುವ ಸಾಧ್ಯತೆ ಇದೆ.