ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದರ್ಶನ್ ಗೆಳತಿ ಅಥವಾ ಎರಡನೇ ಪತ್ನಿ ಎಂದು ಗುರುತಿಸಿಕೊಂಡಿರುವ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಆಕೆಗೆ ತಿಂಗಳುಗಟ್ಟಲೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದರು ಎನ್ನಲಾಗಿದೆ. ರೇಣುಕಾಸ್ವಾಮಿ ತನ್ನ ಗುಪ್ತಾಂಗದ ಫೋಟೊವನ್ನು ಪವಿತ್ರಾಗೆ ಕಳುಹಿಸಿ, ದರ್ಶನ್ಗಿಂತ ನಾನೇನು ಕಡಿಮೆ ಇಲ್ಲ ಬಾ ಎನ್ನುವ ಸಂದೇಶ ಹಾಕಿದ್ದು, ಇದು ಎಲ್ಲರನ್ನೂ ಟ್ರಿಗರ್ ಮಾಡಿದೆ ಎನ್ನಲಾಗಿದೆ.
ದರ್ಶನ್ ವಿಚಾರವಾಗಿ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿಯೇ ಕಿತ್ತಾಡಿಕೊಂಡಿದ್ದರು. ಇದನ್ನು ಅರಿತ ರೇಣುಕಾಸ್ವಾಮಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರಬೇಕು ಎಂದು ಪವಿತ್ರಾಗೆ ಮೆಸೇಜ್ ಮಾಡಲು ಆರಂಭಿಸಿದ್ದ ಎನ್ನಲಾಗಿದೆ.