ಪಾಕಿಸ್ತಾನದಲ್ಲಿ ಪದೇ ಪದೇ ಭೂಕಂಪನ: ಭಯಭೀತರಾದ ಜನರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದಲ್ಲಿ ಇಂದು ಪದೇ ಪದೇ ಮೂರು ಬಾರಿ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಈ ಭೂಕಂಪಗಳು ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 5.2, 4.5 ಮತ್ತು 3.8 ರಷ್ಟು ತೀವ್ರತೆ ದಾಖಲಾಗಿವೆ.

ಮೊದಲಿಗೆ ಇಂದು ಬೆಳಗ್ಗೆಭಾರತೀಯ ಕಾಲಮಾನ 3.54ಕ್ಕೆ ಮೊದಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.2 ರಷ್ಟು ದಾಖಲಾಗಿತ್ತು. ಈ ಭೂಕಂಪದ ಕೇಂದ್ರಬಿಂದು 150 ಕಿ.ಮೀ. ಆಳದಲ್ಲಿ, 30.25 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 69.82 ಡಿಗ್ರಿ ಪೂರ್ವ ರೇಖಾಂಶದಲ್ಲಿ ಕೇಂದ್ರೀಕೃತವಾಗಿತ್ತು. ಈ ಭೂಕಂಪದಿಂದ ಉಂಟಾದ ಹಾನಿ ಅಥವಾ ನಷ್ಟಗಳ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ.

ನಂತರ ಬೆಳಗ್ಗೆ 8.02ಕ್ಕೆ ಎರಡನೇ ಬಾರಿ ಅಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದು ರಿಕ್ಟರ್ ಮಾಪಕದಲ್ಲಿ 4.5 ರಷ್ಟು ತೀವ್ರತೆ ದಾಖಲು ಮಾಡಿದೆ. ಇದಾದ ಬಳಿಕ ಬೆಳಗ್ಗೆ 11.21ಕ್ಕೆ ಮತ್ತೊಂದು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.8 ರಷ್ಟು ತೀವ್ರತೆ ದಾಖಲಾಗಿದೆ.

ಒಂದೇ ದಿನದಲ್ಲಿ ಮೂರು ಭೂಕಂಪಗಳು ಸಂಭವಿಸಿರುವುದರಿಂದ ಪಾಕಿಸ್ತಾನದ ಭೂಕಂಪನ ಸಂಭವಿಸಿದ ಪ್ರದೇಶಗಳಲ್ಲಿ ಜನರು ಭಯಭೀತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!