ಹುಬ್ಬಳ್ಳಿ| ಪತ್ರಿಕಾ ವಿತರಕರ ಅಭಿವೃದ್ಧಿ ಪ್ರಾಧಿಕಾರ ರಚಿಸಲು ರಾಜ್ಯ ಸರ್ಕಾರಕ್ಕೆ ಮನವಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಪತ್ರಿಕಾ ವಿತರಕರ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂದು ಒತ್ತಾಯಿಸಿ ವೃತ್ತ ಪತ್ರಿಕೆಗಳ ಮಾರಾಟಗಾರರ ಸಂಘ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಸಿ.ಎಸ್.ಹಿರೇಮಠ ಮಾತನಾಡಿ, ಪತ್ರಿಕಾರಂಗ ಪ್ರಾರಂಭವಾಗಿ ಸುಮಾರು 183 ವರ್ಷ ಕಳೆಯುತ್ತಾ ಬಂದಿದೆ. ಆದರೆ ಈವರೆಗೆ ಪತ್ರಿಕಾ ವಿತರಕರಿಗೆ ಯಾವುದೇ ರೀತಿಯ ಭದ್ರತೆ ಜೀವನ ಇಲ್ಲದಾಗಿದೆ‌. ಕೊರೋನಾ ಮಹಾಮಾರಿ ಸಂದರ್ಭದಲ್ಲೂ ಎದೆ ಗುಂದದೆ ಪತ್ರಿಕಾ ವಿತರಕರು ಚಳಿಗಾಳಿ ಎನ್ನದೇ ಮನೆ ಮನೆಗೆ ಸುದ್ದಿ ಮುಟ್ಟಿಸುವ ಕಾರ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2 ಕೋಟಿ ರೂ ಮೀಸಲಿಟ್ಟು ಪತ್ರಿಕಾ ವಿತರಕರ ಹಿತರಕ್ಷಣೆ ಮಾಡಿದ್ದಾರೆ. ಆ ಅನುದಾನ ಕೂಡಾ ಬಳಕೆಯಾಗದೇ ಮರಳಿ ಸರ್ಕಾರಕ್ಕೆ ಹೋಗಿರುವುದು ವಿಷಾದನೀಯ. ಹಾಗಾಗಿ ಸರ್ಕಾರ ಪತ್ರಿಕಾ ವಿತರಕರ ಕಲ್ಯಾಣ ನಿಧಿ ಸ್ಥಾಪಿಸಿ ಪ್ರತಿ ಜಿಲ್ಲೆಗೆ ಒಂದು ಕೋಟಿ ಕಾಯ್ದಿರಿಸಿ, ಪತ್ರಿಕಾ ವಿತರಕರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಿವಾಜಿ ತಡಸ, ಕಾರ್ಯದರ್ಶಿ ರಮೇಶ ಜಿತೂರಿ, ಸಹ ಕಾರ್ಯದರ್ಶಿ ಅರುಣ ತೋಡಕರ, ಖಜಾಂಚಿ ಗಿರಿಧರ ದಿವಟೆ ಸೇರಿದಂತೆ ಮುಂತಾದವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!