ಅಪಹರಣಕ್ಕೊಳಗಾದ ಹಡಗಿನಿಂದ ರಕ್ಷಣೆ: ಭಾರತೀಯರಿಂದ ಮೊಳಗಿತು ಭಾರತ್ ಮಾತಾ ಕೀ ಜೈ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೊಮಾಲಿಯಾ (Somalia) ಕರಾವಳಿಯ ಬಳಿ ಅಪಹರಣಕ್ಕೊಳಗಾದ (hijacked vessel) ಸರಕು ಹಡಗಿನಲ್ಲಿದ್ದ 15 ಭಾರತೀಯರು ಸೇರಿದಂತೆ ಎಲ್ಲಾ 21 ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ (Indian Navy) ಶುಕ್ರವಾರ ರಕ್ಷಿಸಿದೆ.

ಈ ಕುರಿತು ವಿಡಿಯೊ ಹಂಚಿಕೊಂಡ ಭಾರತೀಯ ನೌಕಾಪಡೆಯು, ರಕ್ಷಿಸಲ್ಪಟ್ಟ ಭಾರತೀಯರು “ಭಾರತ್ ಮಾತಾ ಕೀ ಜೈ” ಎಂದು ಘೋಷಣೆ ಮಾಡಿದ್ದು, ಸುರಕ್ಷಿತವಾಗಿ ರಕ್ಷಿಸಿದ್ದಕ್ಕಾಗಿ ನೌಕಾಪಡೆಗೆ ಧನ್ಯವಾದ ಅರ್ಪಿಸಿದ್ದಾರೆ.

ನೌಕಾಪಡೆಯಿಂದ ರಕ್ಷಿಸಲ್ಪಟ್ಟವರಲ್ಲಿ ಒಬ್ಬರು ನಾವು 24 ಗಂಟೆಗಳ ಕಾಲ ಸಿಲುಕಿಕೊಂಡಿದ್ದೆವು. ನೌಕಾಪಡೆ ನಮ್ಮನ್ನು ರಕ್ಷಿಸಿದ ನಂತರ ನಿರಾಳರಾದೆವು ಎಂದು ಹೇಳಿದ್ದಾರೆ. ಭಾರತೀಯ ನೌಕಾಪಡೆಯ ಬಗ್ಗೆ ಹೆಮ್ಮೆಯಿದೆ ಎಂದು ಅಪಹರಿಸಿದ ಹಡಗಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.

ನೌಕಾಪಡೆಗೆ ಗುರುವಾರ ಸಂಜೆ 15 ಭಾರತೀಯರು ಸೇರಿದಂತೆ 21 ಸಿಬ್ಬಂದಿಗಳೊಂದಿಗೆ ಸರಕು ಹಡಗನ್ನು ಹೈಜಾಕ್ ಮಾಡುವ ಕರೆ ಬಂದಿದ್ದು, ತಕ್ಷಣವೇ ಹಡಗನ್ನು ರಕ್ಷಿಸುವುದಕ್ಕಾಗಿ ನೌಕಾಪಡೆ ಯುದ್ಧನೌಕೆ, ಕಡಲ ಗಸ್ತು ವಿಮಾನ, ಹೆಲಿಕಾಪ್ಟರ್‌ಗಳು ಮತ್ತು ಪ್ರಿಡೇಟರ್ MQ9B ಡ್ರೋನ್‌ಗಳನ್ನು ನಿಯೋಜಿಸಿದೆ.

ಎಂವಿ ಲೀಲಾ ನಾರ್ಫೋಕ್‌ನ ಎಲ್ಲಾ 21 ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಸುರಕ್ಷಿತವಾಗಿದ್ದಾರೆ. ಭಾರತೀಯ ನೌಕಾ ಪಡೆಗಳು ಈ ಪ್ರದೇಶದಲ್ಲಿ ಶಂಕಿತ ಹಡಗುಗಳ ಬಗ್ಗೆ ತನಿಖೆ ನಡೆಸುತ್ತಿವೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!