LIFE STYLE| ಕಚಗುಳಿ ಕೊಟ್ಟರೆ ನಗು ಯಾಕೆ ಬರುತ್ತೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಕ್ಕಳನ್ನು ನಗಿಸಲು, ಅಥವಾ ಗಂಭೀರವಾಗಿರುವವರನ್ನು ನಗಿಸಲು ಕಚಗುಳಿ ಎಂಬ ಅಸ್ತ್ರವನ್ನು ಬಳಸಿದರೆ ಸಾಕು ಎಂಥವರೂ ನಗುತ್ತಾರೆ.

ವಿಕಸನೀಯ ಜೀವಶಾಸ್ತ್ರಜ್ಞರು ಮತ್ತು ನರವಿಜ್ಞಾನಿಗಳು ನಮಗೆ ಕಚಗುಳಿಯಾದರೆ ಏಕೆ ನಗುತ್ತೇವೆ ಎಂಬುದನ್ನು ತಿಳಿಸಿದ್ದಾರೆ. ಏಕೆಂದರೆ ಮೆದುಳಿನ ಹೈಪೋಥಾಲಮಸ್ ಪ್ರದೇಶವು ನಾವು ಮೃದುವಾದ ಸ್ಪರ್ಶವನ್ನು ಅನುಭವಿಸಿದಾಗ ನಗುವ ಆಜ್ಞೆಯನ್ನು ನೀಡುತ್ತದೆ. ತೋಳುಗಳ ಕೆಳಗೆ, ಗಂಟಲಿನ ಬಳಿ ಮತ್ತು ಪಾದದ ಕೆಳಗೆ ಕಚಗುಳಿ ಇಟ್ಟರೆ, ನಗುವುದನ್ನು ನಿಲ್ಲಿಸಲಾಗುವುದಿಲ್ಲ. ಅದಕ್ಕೇ ಕಚಗುಳಿ ಇಟ್ಟಾಗ ಕೂಗಿ, ಕುಣಿದು ಕುಪ್ಪಳಿಸುತ್ತೇವೆ. ಕೆಲವರು ಕಚಗುಳಿ ಇಡುವುದನ್ನು ಇಷ್ಟಪಡುವುದಿಲ್ಲ ಅಂತವರಲ್ಲಿ ನರಗಳು ತೀವ್ರವಾದ ಒತ್ತಡದಲ್ಲಿದ್ದು, ಕೋಪವನ್ನು ತೋರಿಸುತ್ತವೆ.

ಇನ್ನು ನಮಗೆ ನಾವೇ ಕಚಗುಳಿ ಇಟ್ಟರೆ ನಗು ಬರುವುದಿಲ್ಲ. ಮಿದುಳಿನ ಹಿಂಭಾಗದಲ್ಲಿರುವ ಸೆರೆಬೆಲ್ಲಮ್ ಮೆದುಳಿಗೆ ನೀವೇ ಕಚಗುಳಿ ಕೊಟ್ಟಿದ್ದೀರಿ ಎಂದು ಮುಂಚಿತವಾಗಿ ಸಂಕೇತಿಸುತ್ತದೆ. ಇದರಿಂದಾಗಿ ನಗು ಬರುವುದಿಲ್ಲ. ನಗುವು ಸಾಂಕ್ರಾಮಿಕವಾಗಿದೆ. ಒಬ್ಬ ವ್ಯಕ್ತಿಯು ನಗಲು ಪ್ರಾರಂಭಿಸಿದರೆ, ಆ ಸ್ಥಳದಲ್ಲಿ ಎಲ್ಲರೂ ನಗುತ್ತಾರೆ. ನಗು ಸಮಾಜದಲ್ಲಿ ಉತ್ತಮ ಧನಾತ್ಮಕ ಬಾಂಧವ್ಯಗಳನ್ನು ಸೃಷ್ಟಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!