ಮಧ್ಯಪ್ರದೇಶ ಕಾಂಗ್ರೆಸ್ ಗೆ ತಲೆನೋವು ತಂದ ಹಿರಿಯ ನಾಯಕನ ರಾಜೀನಾಮೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಧ್ಯಪ್ರದೇಶ ಚುನಾವಣೆ ರಣರಂಗದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತಿದೆ.

ಇದರ ನಡುವೆ ಅನೇಕರಲ್ಲಿ ಟಿಕೆಟ್ ಸಿಗದ ಬೇಸರ ಶುರುವಾಗಿದ್ದು, ಅಸಮಾಧಾನ ಜೋರಾಗುತ್ತಿದೆ.

ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಕಮಲನಾಥ್ ಆಪ್ತನಾಗಿ ಗುರುತಿಸಿಕೊಂಡಿದ್ದ ಯದ್ವೇಂದ್ರ ಸಿಂಗ್ ಅಸಮಾಧಾನಗೊಂಡಿದ್ದಾರೆ. ಟಿಕೆಟ್ ನಿರಾಕರಿದ ಕಾರಣಕ್ಕೆ ಆಕ್ರೋಶಗೊಂಡಿರುವ ಯದ್ವೇಂದ್ರ ಸಿಂಗ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್‌ನಿಂದ ರಾಜೀನಾಮೆ ನೀಡಿ ಹೊರಬಂದ ಯದ್ವೇಂದ್ರ ಸಿಂಗ್ ಇದೀಗ ಬಹುಜನ ಸಮಾಜ ಪಾರ್ಟಿ ಸೇರಿಕೊಂಡಿದ್ದಾರೆ. ಬಳಿಕ ಮಾತನಾಡಿರುವ ಯದ್ವೇಂದ್ರ ಸಿಂಗ್, ಕಾಂಗ್ರೆಸ್ ಪಕ್ಷ ಕಟ್ಟಲು ಸುದೀರ್ಘ ವರ್ಷಗಳ ಕಾಲು ದುಡಿದಿದ್ದೇನೆ. ಮಧ್ಯ ಪ್ರದೇಶದಲ್ಲಿ ತಳಮಟ್ಟದಿಂದ ಪಕ್ಷ ಕಟ್ಟಿ ಈ ಮಟ್ಟಕ್ಕೆ ಬೆಳೆಸಿದ್ದೇನೆ. ನನ್ನಂತ ಹಲವು ನಾಯಕರು ದುಡಿದಿದ್ದಾರೆ. ಕಮಲನಾಥ್ ಬಲಗೈ ಬಂಟ ಎಂದೇ ಗುರುಸಿತಿಕೊಂಡಿದ್ದೆ. ಆದರೆ ನನಗೆ ಟಿಕೆಟ್ ನಿರಾಕರಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಲಾಗಿದೆ. ನನ್ನ ಗೆಲುವು ಸ್ಪಷ್ಟವಾಗಿದೆ. ಆದರೂ ಟಿಕೆಟ್ ನಿರಾಕರಿಸಲಾಗಿದೆ. ನನಗೆ ಟಿಕೆಟ್ ನಿರಾಕರಿಸಿದ ಕಮಲನಾಥ್‌ಗೆ ತಕ್ಕ ಪಾಠ ಕಲಿಸಲು ಬಹುಜನ ಸಮಾಜ ಪಾರ್ಟಿ ಸೇರಿದ್ದೇನೆ ಎಂದು ಯದ್ವೇಂದ್ರ ಸಿಂಗ್ ಹೇಳಿದ್ದಾರೆ.
ನನ್ನ ಕ್ಷೇತ್ರದಲ್ಲಿ ನಾನು ಗೆಲ್ಲುತ್ತೇನೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಕಮಲ್‌ನಾಥ್ ಆಪ್ತರನ್ನು ಸೋಲಿಸುವುದೇ ನನ್ನ ಗುರಿ. ನನ್ನ ವಿರುದ್ದ ಕಮಲನಾಥ್ ತೆಗೆದುಕೊಂಡ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುವಂತೆ ಮಾಡುತ್ತೇನೆ ಎಂದು ಯದ್ವೇಂದ್ರ ಸಿಂಗ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!