ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಲ್ಲಾ ಪಾನ್ ಮಸಾಲಾ ಪ್ಯಾಕ್‌ಗಳಲ್ಲಿ ಚಿಲ್ಲರೆ ಮಾರಾಟ ಬೆಲೆಯನ್ನು ಪ್ರದರ್ಶಿಸುವುದನ್ನು ಕಡ್ಡಾಯವಾಗಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿರುವ ಗ್ರಾಹಕ ವ್ಯವಹಾರಗಳ ಇಲಾಖೆಯು ಫೆಬ್ರವರಿ 1, 2026ರಿಂದ ಜಾರಿಗೆ ಬರುವಂತೆ ಅಧಿಸೂಚನೆಯನ್ನು ಹೊರಡಿಸಿದ್ದಾರೆ .
ತಿದ್ದುಪಡಿ ಮಾಡಿದ ನಿಯಮಗಳು ಫೆಬ್ರವರಿ 1, 2026ರಿಂದ ಜಾರಿಗೆ ಬರಲಿದ್ದು, ಆ ದಿನಾಂಕದಿಂದ ಎಲ್ಲಾ ಪಾನ್ ಮಸಾಲಾ ತಯಾರಕರು, ಪ್ಯಾಕರ್‌ಗಳು ಮತ್ತು ಆಮದುದಾರರು ಈ ನಿಯಮವನ್ನು ಪಾಲಿಸಲೇಬೇಕು. ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಅನುಪಮ್ ಮಿಶ್ರಾ ಅವರು ಅಧಿಸೂಚನೆಯನ್ನು ಹೊರಡಿಸಿದ್ದಾರೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ.
ಹಿಂದೆ ವಿನಾಯಿತಿ ಪಡೆದಿದ್ದ 10 ಗ್ರಾಂ ಅಥವಾ ಅದಕ್ಕಿಂತ ಕಡಿಮೆ ತೂಕದ ಸಣ್ಣ ಪಾನ್ ಮಸಾಲಾ ಪ್ಯಾಕ್‌ಗಳು ಕೂಡ ಈಗ ತಮ್ಮ ಲೇಬಲ್‌ಗಳಲ್ಲಿ ಚಿಲ್ಲರೆ ಮಾರಾಟ ಬೆಲೆಯನ್ನು ಮುದ್ರಿಸಬೇಕು. ಸಚಿವಾಲಯದ ಪ್ರಕಾರ, ಎಲ್ಲಾ ಪ್ಯಾಕೇಜ್‌ಗಳ ಮೇಲೆ ಚಿಲ್ಲರೆ ಮಾರಾಟ ಬೆಲೆಯನ್ನು ಕಡ್ಡಾಯಗೊಳಿಸುವ ಮೂಲಕ, ಈ ತಿದ್ದುಪಡಿಯು ಪಾನ್ ಮಸಾಲಾದ ಮೇಲೆ ಚಿಲ್ಲರೆ ಮಾರಾಟ ಬೆಲೆ ಆಧಾರಿತ ಜಿಎಸ್‌ಟಿ ತೆರಿಗೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುತ್ತದೆ.

