ಹೊಸದಿಗಂತ ವರದಿ,ಬಳ್ಳಾರಿ:
ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಹಾಗೂ ಬ್ರಾಹ್ಮಣ ಸಮುದಾಯ ಹಿರಿಯ ಮುಖಂಡ ಗಣೇಶ್ ರಾವ್ (94) ಅವರು ಸೋಮವಾರ ನಿಧನರಾದರು.
ಮೃತರು ಅಪಾರ ಬಂಧು ಬಳಗವನ್ನು ಹೊಂದಿದ್ದು, ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಬಂಧುಗಳು, ಸಮುದಾಯ ಮುಖಂಡರು ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಮೃತರ ಆತ್ಮಕ್ಕೆ ದೇವರು ಶಾಂತಿ, ನೆಮ್ಮದಿ ನೀಡಲಿ, ಕುಟುಂಬದ ಸದಸ್ಯರಿಗೆ ದುಖಃ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಆರ್.ಪ್ರಕಾಶ್ ರಾವ್, ಉಪಾಧ್ಯಕ್ಷ ಡಾ.ಶ್ರೀನಾಥ್ ಸೇರಿದಂತೆ ಸಮುದಾಯದ ಅಪಾರ ಬಂಧುಗಳು ಮೃತರ ಆತ್ಮಕ್ಕೆ ದೇವರು ಶಾಂತಿ ನೆಮ್ಮದಿ ನೀಡಲಿ, ಕುಟುಂಬದ ಸದಸ್ಯರಿಗೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಗಣೇಶ್ ರಾವ್ ರವರು ನಮ್ಮ ಊರಾದ ರಾಮಸಾಗರದವರು ಇವರು ನ್ಯಾಯಶಾಸ್ತ್ರದಲ್ಲಿ ಅತ್ಯಂತ ಪರಿಣಿತರಾಗಿದ್ದವರು ಇವರ ಜೊತೆ ನಾನು ಕೆಲವು ಬಾರಿ ಜಾನ್ ಆಸ್ಟಿನ್ ಹಾರ್ಟ್ ಜಸ್ಟೀಸ್ ಹೋಮ್ಸ್ ಇವರ ಬಗ್ಗೆ ಚರ್ಚೆ ಮಾಡಿದ್ದೆ ಇವರನ್ನು ಎಂಬಿಎ ಪಾಠ ಮಾಡುವಾಗ ವಿಶೇಷ ಉಪನ್ಯಾಸಕ್ಕಾಗಿ ಆಹ್ವಾನಿಸಿದೆ ಇವರು ಪಬ್ಲಿಕ್ ಪಾಲಿಸಿ ಎನ್ನುವ ವಿಷಯದ ಮೇಲೆ ಅತ್ಯಂತ ಗಂಭೀರವಾದ ಪಾಠವನ್ನು ನೀಡಿದ್ದರು ಇವರ ಮನೆಯಲ್ಲಿ ಏನೇ ಮಾತನಾಡಿದರು ಅದು ಹೆಚ್ಚು ಕಡಿಮೆ ಕಾನೂನಿನ ಬಗ್ಗೆ ಇರುತ್ತಿತ್ತು ಇವರ ಜೊತೆ ಚರ್ಚೆ ಮಾಡುವಾಗ ಇವರ ಕಣ್ಣುಗಳ ಚಲನೆ ಮನಸ್ಸಿನಲ್ಲಿ ಕುತೂಹಲ ಮತ್ತು ಭಯ ಹುಟ್ಟಿಸುವಂತಿರುತ್ತಿತ್ತು ಅಸಂಬದ್ಧವಾದ ಯಾವುದೇ ವಿಷಯವನ್ನು ಇವರು ಮಾತನಾಡುತ್ತಿರಲಿಲ್ಲ ಒಂದು ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಕಾರ್ಯಕ್ರಮವಾದಾಗ ಇವರನ್ನು ಕೇಳಿದ್ದೆ ನಿಮಗೆ ಹೋಳಿಗೆ ಇಷ್ಟವಾದಲ್ಲಿ ತಂದುಕೊಡುತ್ತೇನೆಂದು. ನಯವಾಗಿ ಬೇಡ ಎಂದು ತಿಳಿಸಿದರು ತುಂಬಾ ಹೃದಯವಂತರು ಮಾನವಂತರು ಮತ್ತು ನಿಷ್ಟುರವಾದಿಗಳು ಇವರು ಅಗಲಿದ್ದು ಮನಸ್ಸಿಗೆ ತುಂಬಾ ಬೇಸರ ಉಂಟು ಮಾಡಿದೆ ಇವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ಇವರ ಮಕ್ಕಳಿಗೆ ಮತ್ತು ಬಂಧು ಬಳಗಕ್ಕೆ ಮತ್ತು ನಮ್ಮೆಲ್ಲ ಸಮಾಜದ ಜನರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ