ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊರಗ್ ಸಿಗೋ ನೋಡ್ಕೋತಿನಿ, ಜೀವಂತವಾಗಿ ಮನೆಗೆ ಹೋಗ್ತ್ಯ?? ಅದೆಂಗ್ ಹೋಗ್ತ್ಯ ನಾನೂ ನೋಡ್ತೀನಿ ಎಂದು ನಿವೃತ್ತ ಶಿಕ್ಷಕನೊಬ್ಬ ಜಡ್ಜ್‌ಗೆ ಅವಾಝ್ ಹಾಕಿದ್ದಾರೆ.
ಪ್ರಕರಣವೊಂದರಲ್ಲಿ ತಪ್ಪಿತಸ್ಥ ಎಂದು ತೀರ್ಪು ಪ್ರಕಟಿಸಿದ ದೆಹಲಿ ಕೋರ್ಟ್‌ನ ನ್ಯಾಯಾಧೀಶರಿಗೆ ನಿವೃತ್ತ ಶಿಕ್ಷಕನೋರ್ವ ಎಲ್ಲರೆದುರು ಜೀವ ಬೆದರಿಕೆ ಹಾಕಿದ್ದಾರೆ. ನ್ಯಾಯಾಧೀಶೆ ಶಿವಾನಿ ಮಂಗಲ್ ಎಂಬುವವರು ಏಪ್ರಿಲ್ 2 ರ ಆದೇಶದಲ್ಲಿ, ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138 (ಚೆಕ್ ಡಿಸ್ಆನರ್) ಅಡಿಯಲ್ಲಿ ಆ ವ್ಯಕ್ತಿಯನ್ನು ದೋಷಿ ಎಂದು ತೀರ್ಪು ಪ್ರಕಟಿಸಿದರು. ನಂತರ ನಿವೃತ್ತ ಶಿಕ್ಷಕ, ನ್ಯಾಯಾಲಯದಲ್ಲೇ ನ್ಯಾಯಾಧೀಶರ ಮೇಲೆ ಕೋಪದಿಂದ ಸಿಡಿಮಿಡಿಗೊಂಡಿದ್ದಾನೆ.
ಆ ವ್ಯಕ್ತಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ತಾಯಿಯ ವಿರುದ್ಧ ಸ್ಥಳೀಯ ಹಿಂದಿ ಭಾಷೆಯಲ್ಲಿ ನ್ಯಾಯಾಧೀಶರಿಗೆ ನಿಂದಿಸಲು ಆರಂಭಿಸಿದ್ದಾನೆ. ಆರೋಪಿ ಕೂಡ ಕೈಯಲ್ಲಿ ಯಾವುದೋ ವಸ್ತುವನ್ನು ಹಿಡಿದಿದ್ದು ನ್ಯಾಯಾಧೀಶರ ಮೇಲೆ ಎಸೆಯಲು ಪ್ರಯತ್ನಿಸಿದ್ದಾನೆ.
ನ್ಯಾಯಾಧೀಶರು ಅಪರಾಧಿಯ ವಕೀಲ ಅತುಲ್ ಕುಮಾರ್ ಅವರಿಗೆ ಲಿಖಿತವಾಗಿ ಅವರ ನಡವಳಿಕೆಯನ್ನು ವಿವರಿಸಲು ಮತ್ತು ಕ್ರಿಮಿನಲ್ ನ್ಯಾಯಾಂಗ ನಿಂದನೆಯ ಕ್ರಮವನ್ನು ಎದುರಿಸಲು ಅವರನ್ನು ದೆಹಲಿ ಹೈಕೋರ್ಟ್‌ಗೆ ಏಕೆ ಕಳುಹಿಸಬಾರದು ಎಂಬುದಕ್ಕೆ ಕಾರಣ ತೋರಿಸಲು ನೋಟಿಸ್ ನೀಡಿದ್ದಾರೆ.
ನ್ಯಾಯಾಲಯ ಎನ್‌ಐ ಕಾಯ್ದೆ ಪ್ರಕರಣದಲ್ಲಿ ನಿವೃತ್ತ ಶಿಕ್ಷಕನಿಗೆ 1.10 ವರ್ಷಗಳ ಜೈಲು ಶಿಕ್ಷೆ ಮತ್ತು 6.65 ಲಕ್ಷ ರೂ. ದಂಡ ವಿಧಿಸಿದೆ. ಅಪರಾಧಿ ಮೇಲ್ಮನವಿ ಸಲ್ಲಿಸಲು ಮನವಿ ಸಲ್ಲಿಸಿದರು, ಅದನ್ನು ನ್ಯಾಯಾಲಯವು ಅನುಮತಿಸಿತು.