ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ನಿವೃತ್ತಿ ಪರ್ವ! ಶುಕ್ರವಾರ ಒಂದೇ ದಿನ ರಾಜ್ಯದಲ್ಲಿ ಸುಮಾರು 15 ಸಾವಿರ ಮಂದಿ ಸರ್ಕಾರಿ ನೌಕರರು ನಿವೃತ್ತ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೆಎಸ್‌ಇಬಿ (ಕೇರಳ ಸ್ಟೇಟ್ ಇಲೆಕ್ಟ್ರಿಸಿಟಿ ಬೋರ್ಡ್)ನಿಂದ 1099 ಮಂದಿ ಉದ್ಯೋಗಿಗಳು, ರಾಜ್ಯದ ವಿವಿಧ ಶಾಲೆಗಳಿಂದ ಸುಮಾರು 7500 ಶಾಲಾ ಶಿಕ್ಷಕರು, ಎಂಜಿ ವಿಶ್ವವಿದ್ಯಾಲಯದಿಂದ 800 ಉದ್ಯೋಗಿಗಳು, ಮೋಟಾರು ವಾಹನ ಇಲಾಖೆಯಿಂದ 60 ಉದ್ಯೋಗಿಗಳು, ಕಂದಾಯ ಇಲಾಖೆಯಿಂದ 461 ಉದ್ಯೋಗಿಗಳು, ಸಾರ್ವಜನಿಕ ಸರಬರಾಜು ಇಲಾಖೆಯಿಂದ 66 ಮತ್ತು ಕೆಎಸ್‌ಆರ್‌ಟಿಸಿಯಿಂದ 674 ಉದ್ಯೋಗಿಗಳು, ಕೇರಳ ವಿಶ್ವವಿದ್ಯಾಲಯದಿಂದ 16 ಮಂದಿ ಈ ಪಟ್ಟಿಯಲ್ಲಿ ಸೇರಿದ್ದಾರೆ.
ಈ ನಿವೃತ್ತಿ ಪರ್ವದ ಬೆನ್ನಿಗೇ ಕೇರಳ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಉಂಟಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಸರ್ಕಾರಿ ನೌಕರರಿಗೆ ನಿವೃತ್ತಿ ಸೌಲಭ್ಯ ನೀಡಲು 7500 ಕೋಟಿ ರೂ.ಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದ್ದು, ಈಗಾಗಲೇ ಸರ್ಕಾರ ಕೇಂದ್ರಕ್ಕೆ ಪತ್ರವನ್ನೂ ಬರೆದಿದೆ.