ಚುನಾವಣೆಯಿಂದ ನಿವೃತ್ತಿ ಅಷ್ಟೇ…ರಾಜಕೀಯದಿಂದ ಅಲ್ಲ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾನು ಚುನಾವಣೆಯಿಂದ ನಿವೃತ್ತಿ ಅಷ್ಟೇ.ರಾಜಕೀಯ ನಿವೃತ್ತಿ ಆಗುವುದಿಲ್ಲ, ನಾನು ನಿಮ್ಮ ಪರವಾಗಿ ಹೋರಾಟ ಮಾಡೇ ಮಾಡುತ್ತೇವೆ. ಅವಕಾಶ ವಂಚಿತರ ಪರವಾಗಿ ಇರುತ್ತೇ, ಹೋರಾಟ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇಂದು(ಜುಲೈ 02) ಬೆಂಗಳೂರಿನ ಕೇತೋಹಳ್ಳಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮ, ರಾಜಕೀಯ ನಡೆ ಬಗ್ಗೆ ಸ್ಪಷ್ಟನೆ ನೀಡಿದರು.

ಇದು ನನ್ನ ಕೊನೇ ಚುನಾವಣೆ ಎಂದು ಹೇಳಿದ್ದೆ.ಚುನಾವಣೆಯಿಂದ ನಿವೃತ್ತಿ ಪಡೆಯುತ್ತೇನೆ ಅಷ್ಟೇ, ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ. ನಾನು ಜನರ ಪರವಾಗಿ ಇರುತ್ತೇನೆ, ಹೋರಾಟ ಮಾಡುತ್ತೇನೆ ಎಂದು ರಾಜಕೀಯ ನಡೆ ಬಗ್ಗೆ ಸ್ಪಷ್ಟಪಡಿಸಿದರು.

ಇದೇ ವೇಳೆ ತಮ್ಮ ಹಳೆಯ ದಿನಗಳ ಬಗ್ಗೆ ಮೆಲುಕು ಹಾಕಿದ ಸಿನಂದು ಅಂಬಾಸಿಟರ್ ಕಾರು ಇತ್ತು. ಆಗ ಚುನಾವಣೆಯಲ್ಲಿ ಸೋತಿದ್ದೆ, ಬೇರೆ ಕೆಲಸ ಇರಲಿಲ್ಲ. ಆಗ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದೆ ಎಂದು ಹಿಂದಿನ ಹಿಸ್ಟರಿಯನ್ನು ಬಿಚ್ಚಿಟ್ಟರು.

1988ರಲ್ಲಿ ಕನಕದಾಸರ 500ನೇ ಜಯಂತಿ ಆಚರಿಸಲಾಗಿತ್ತು. ಆಗ ಎಸ್​.ಆರ್​.ಬೊಮ್ಮಾಯಿ ಸಂಪುಟದಲ್ಲಿ ನಾನು ಸಚಿವನಾಗಿದ್ದೆ. ಅಂದು ಇಡೀ ವರ್ಷ ಕನಕ ಜಯಂತಿ ಆಚರಿಸಬೇಕು ಎಂದು ಹೇಳಿದ್ದೆ. ಅದೇ ವೇಳೆ ಕನಕ ಗುರು ಪೀಠ ಸ್ಥಾಪನೆಯ ಬೇಡಿಕೆ ಇತ್ತು ಎಂದರು.

ಚುನಾವಣೆಯಲ್ಲಿ ಸೋತಿದ್ದೆ, ಆಗ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದೆ. ಎಲ್ಲ ಜಿಲ್ಲೆಗಳಲ್ಲೂ ದುಡ್ಡು ವಸೂಲಿ ಮಾಡುವ ಕೆಲಸ ಆಯ್ತು. 40 ಲಕ್ಷ ರೂ. ಹೆಚ್ಚು ಹಣ ಖರ್ಚಾಯ್ತು. ಆಗ ವಿಶ್ವನಾಥ್ ಕಾಂಗ್ರೆಸ್, ನಾನು ಜನತಾದಳದಲ್ಲಿದ್ದೆ. ಈ ವಿಶ್ವನಾಥ್ ಬಹಳ ಬ್ಯುಸಿ ಮನುಷ್ಯ. ಎಲ್ಲ ಜಿಲ್ಲೆಗಳಿಗೂ ಬರುತ್ತಿರಲಿಲ್ಲ. ಬಂಡೆಪ್ಪ ಕಾಶಂಪೂರ್ ರನ್ನ ಭೇಟಿ ಮಾಡಿ ಬಿಜಾಪುರದಲ್ಲಿ ಮಾಡಿ ಅಂದ್ರು. ಪುಟ್ಟ ವೀರ್ ತಾರಕ್ ಅವರನ್ನ ಬೀರೆಂದ್ರ ತಾರಕ ಅಂತ ಹೆಸರಿಟ್ಟವರೇ ಈ ವಿಶ್ವನಾಥ್. ಆಗ ಬಂಗಾರಪ್ಪ ಸಿಎಂ ಆಗಿದ್ರು. ಅವರು ದುಡ್ಡು ಕೊಡುತ್ತೇವೆ ಅಂದಿದ್ದಾರೆ ಅಂತ ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ಬಂಗಾರಪ್ಪ 25 ಲಕ್ಷ ರೂ. ಕೊಡುವುದಕ್ಕೆ ಬಂಗಾರಪ್ಪ ಮುಂದಾಗಿದ್ದರು. ನಾವು ಆಹ್ವಾನಕ್ಕೆ ಬಂದಿದ್ದೇವೆ ಯಾರ ಬಳಿಯೂ ಒಂದು ಪೈಸೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ವಿ ಎಂದು ಸ್ಮರಿಸಿಕೊಂಡರು

1998ರಲ್ಲಿ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿದ್ದ ಶರತ್ ಅವರನ್ನು ಆಹ್ವಾನ ಮಾಡಿದ್ವಿ. ರಾಜ್ಯದ ಎಲ್ಲ ಕಡೆಯಿಂದ 5 ಲಕ್ಷ ಜನ ಸೇರಿದ್ದರು. ಗುರು ಪೀಠಕ್ಕೆ ಬ್ಯಾಂಕ್ ನಲ್ಲಿ ದುಡ್ಡು ಇಟ್ಟಿದ್ವಿ. ಎಷ್ಟು 40 ಲಕ್ಷನಾ ? 35 ಲಕ್ಷನಾ ? ಎಷ್ಟೋ ಬಿಡಿ. ಇದು ಕುರುಬರ ಮಠ ಅಲ್ಲ, ಎಲ್ಲ‌ ಶೋಷಿತ ವರ್ಗದವರ ಮಠ ಆಗಬೇಕೆಂದು ಪ್ರಾರಂಭ ಮಾಡಿದ್ದೆವು. ವಿಶ್ವನಾಥ್ ದು ಅವತ್ತು ಪ್ರಾಸ್ತಾವಿಕ ಭಾಷಣ ಇತ್ತು. ಅವರು ಭಾರೀ ಭಾಷಣ ಹೊಡೆದ್ರು. ನಿಮೆಗಲ್ಲ ಗೊತ್ತಿರಲಿ ಎಂದು ಇತಿಹಾಸ ಹೇಳುತ್ತಿದ್ದೇನೆ ಎಂದು ವೇದಿಕೆ ಮೇಲಿದ್ದವರಿಗೆ ಸಿಎಂ ಪಾಠ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!