March 26, 2026
Thursday, March 26, 2026
spot_img

ಶಿಖರ್ ಧವನ್ ಗೆ 5.7 ಕೋಟಿ ರೂ ಹಣ ಹಿಂದಿರುಗಿಸಿ: ಮಾಜಿ ಪತ್ನಿಗೆ ಕೋರ್ಟ್ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಕ್ರಿಕೆಟಿಗ ಶಿಖರ್ ಧವನ್ ಇತ್ತೀಚೆಗೆ ಎರಡನೇ ಮದುವೆಯಾಗಿದ್ದು, ಈ ಸಂಭ್ರಮದ ನಡುವೆಮಾಜಿ ಪತ್ನಿ ಆಯೇಷಾ ಮುಖರ್ಜಿ ಅವರು 5.7 ಕೋಟಿ ರೂಪಾಯಿಗಳನ್ನು ಹಿಂದಿರುಗಿಸುವಂತೆ ಕೋರ್ಟ್ ಆದೇಶ ನೀಡಿದೆ.

ಶಿಖರ್ ಧವನ್ ವಿಚ್ಛೇದನದ ನಂತರ ಪರಿಹಾರವಾಗಿ ಆಯೇಷಾ ಮುಖರ್ಜಿಗೆ ಈ ಹಣ ನೀಡಿದ್ದರು. ಆದರೆ ದೆಹಲಿಯ ಪಾಟಿಯಾಲಾ ಹೌಸ್ ಕೋರ್ಟ್ ಧವನ್ ಅವರು ಆಸ್ತಿ ವಸಾಹತು ರೂಪದಲ್ಲಿ ನೀಡಿದ ಈ ಮೊತ್ತವು ಭಾರತೀಯ ಕಾನೂನಿನ ಪ್ರಕಾರ ಸರಿಯಾಗಿಲ್ಲ ಹೇಳಿದ್ದು, ಆಸ್ಟ್ರೇಲಿಯಾದ ಕುಟುಂಬ ನ್ಯಾಯಾಲಯದ ತೀರ್ಪು ಭಾರತಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿ ಆ ಹಣವನ್ನು ಹಿಂದುರಿಗಿಸುವಂತೆ ಆದೇಶ ನೀಡಿದೆ.

ದೆಹಲಿಯ ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರ ಕುಮಾರ್ ಗಾರ್ಗ್ ಅವರು, ಧವನ್ ಅವರಿಂದ ಆಯೇಷಾ 16.9 ಕೋಟಿ ರೂಪಾಯಿಗಳನ್ನು ಒತ್ತಾಯಿಸಲು ಸಾಧ್ಯವಿಲ್ಲ.ಆಯೆಷಾ ಅವರು ತೆಗೆದುಕೊಂಡ ಆಸ್ತಿ ವಸಾಹತು ನಿಯಮಗಳ ಅಡಿಯಲ್ಲಿ 5.7 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡಿದ್ದಾರೆ, ಅದನ್ನು ಹಿಂದಿರುಗಿಸಬೇಕಾಗುತ್ತದೆ ಎಂದು ತೀರ್ಪು ನೀಡಿದೆ.

ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ, ಎಲ್ಲಾ ಗಂಡನ ಆಸ್ತಿಯನ್ನು ಆಸ್ಟ್ರೇಲಿಯಾದ ಕಾನೂನಿನಡಿಯಲ್ಲಿ ಮೆರೈಟಲ್ ಪೂಲ್ನಲ್ಲಿ ಪರಿಗಣಿಸಲಾಗುತ್ತದೆ. ಆಸ್ಟ್ರೇಲಿಯಾದ ನ್ಯಾಯಾಲಯವು ಭಾರತ ಮತ್ತು ವಿದೇಶಗಳಲ್ಲಿನ ಎಲ್ಲಾ ಆಸ್ತಿಗಳಲ್ಲಿ ಶೇಕಡಾ 60 ರಷ್ಟು ಅವರ ಪತ್ನಿ ಆಯೆಷಾಗೆ ನೀಡಲು ಆದೇಶಿಸಿತ್ತು.

ಆಸ್ಟ್ರೇಲಿಯಾ ಆದೇಶದ ಬಗ್ಗೆ ದೆಹಲಿ ನ್ಯಾಯಾಲಯ ಸೋಮವಾರ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಆಯೆಷಾ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಮತ್ತು ಆಸ್ಟ್ರೇಲಿಯಾದ ನ್ಯಾಯಾಲಯವು ಧವನ್ ವಿರುದ್ಧ ಏಕಪಕ್ಷೀಯ ತೀರ್ಪು ನೀಡಿದೆ ಎಂದು ಹೇಳಿದೆ.

ಆಸ್ಟ್ರೇಲಿಯಾ ನ್ಯಾಯಾಲಯ, ಧವನ್ ಅವರು ತಮ್ಮ ಎಲ್ಲಾ ಆಸ್ತಿಗಳನ್ನು ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡಬೇಕು ಮತ್ತು ಆಯೇಷಾ ಗೆ ಎಲ್ಲಾ ಹಣವನ್ನು ನೀಡಬೇಕು ಎಂದು ಹೇಳಿತ್ತು.

ದೆಹಲಿ ನ್ಯಾಯಾಲಯವು 2023 ರಲ್ಲಿ ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿಗೆ ವಿಚ್ಛೇದನವನ್ನು ನೀಡಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !