ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಹೆಚ್.ಡಿ. ರೇವಣ್ಣ ದಿಢೀರನೆ ತಮ್ಮ ಪ್ರಯಾಣದ ಮಾರ್ಗವನ್ನು ಬದಲಿಸಿದ್ದಾರೆ. ಹೊಳೆನರಸೀಪುರ ಬದಲು ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ.
ನೂರಾರು ಜನರು ರೇವಣ್ಣ ಬರುವುದನ್ನೇ ಕಾಯುತ್ತಿದ್ದರು. ಆದರೆ, ರೇವಣ್ಣ ಏಕಾಏಕಿ ಚನ್ನರಾಯಪಟ್ಟಣ ಬಿಟ್ಟು ಮೈಸೂರಿನತ್ತ ಪ್ರಯಾಣ ಬೆಳೆಸಿದ್ದು. ಕಾದು ಕುಳಿತಿದ್ದ ನೂರಾರು ಮಂದಿ ನಿರಾಸೆಯಿಂದ ತೆರಳಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾಮೀನು ದೊರೆತ ಹಿನ್ನೆಲೆಯಲ್ಲಿ 20 ದಿನಗಳ ನಂತರ ಹೆಚ್.ಡಿ. ರೇವಣ್ಣ ಇಂದು ಹಾಸನ ಜಿಲ್ಲೆ ಹೊಳೆನರಸೀಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು.