ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ದರ್ಶನ್ ಕೆಂಗಣ್ಣಿಗೆ ಗುರಿಯಾಗಿ ಕಡೆಗೆ ಕೊಲೆಯಾಗಿದ್ದಾರೆ ಎನ್ನುವ ಆರೋಪ ಇದೆ.
ಇದೀಗ ಪೊಲೀಸರ ತನಿಖೆಯಲ್ಲಿ ರೇಣುಕಾಸ್ವಾಮಿ ಕುರಿತ ಮತ್ತಷ್ಟು ರೋಚಕ ಅಂಶಗಳು ಬಯಲಾಗಿದೆ. ಅದರಲ್ಲಿ ಕೊಲೆಯಾದ ರೇಣುಕಾಸ್ವಾಮಿ ಐದು ತಿಂಗಳಿನಿಂದ ಪವಿತ್ರಾ ಗೌಡಗೆ ಕಾಟ ಕೊಡಲು ಶುರು ಮಾಡಿದ್ದ. ಪವಿತ್ರಾ ಗೌಡಗೆ ಬರೋಬ್ಬರಿ 200 ಮೆಸೇಜ್ ಕಳುಹಿಸಿದ್ದ ಎನ್ನಲಾಗಿದೆ.
ಆ 200 ಮೆಸೇಜ್‌ಗಳು ಅಶ್ಲೀಲ ಮೆಸೇಜ್‌ಗಳಾಗಿದ್ದವು ಎನ್ನಲಾಗಿದೆ. ಈತನ ಮೆಸೇಜ್‌ಗಳನ್ನ ನೋಡಿ, ನೋಡಿ ರೋಸಿ ಹೋಗಿದ್ದ ಪವಿತ್ರಾ ಗೌಡ ಅವರ ಆರೋಪಿ ಪವನ್‌ಗೆ ಹೇಳಿದ್ದರು. ನಂತರ ಆ ವಿಷಯ ದರ್ಶನ್‌ಗೆ ತಿಳಿದಿತ್ತು ಎನ್ನಲಾಗಿದೆ.