ಭಾರತ-ಪಾಕ್ ನಡುವೆ ಪ್ರತೀಕಾರದ ಕಾರ್ಮೋಡ.. ಮಧ್ಯಸ್ಥಿಕೆ ವಹಿಸಲು ಮುಂದಾದ ‘ದೊಡ್ಡಣ್ಣ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಮೆರಿಕ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಇಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ ಮಾತನಾಡುತ್ತಾ, ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಸಂವಹನವನ್ನು ಮರುಸ್ಥಾಪಿಸುವ ಕರೆಯನ್ನು ಪುನರುಚ್ಚರಿಸಿದ್ದಾರೆ.

ವಿವಾದವನ್ನು ಕಡಿಮೆ ಮಾಡುವ ಮತ್ತು ಪಾಕಿಸ್ತಾನ ಮತ್ತು ಭಾರತದ ನಡುವಿನ ತಪ್ಪು ಲೆಕ್ಕಾಚಾರಗಳನ್ನು ತಪ್ಪಿಸಲು ನೇರ ಸಂವಹನವನ್ನು ಮರುಸ್ಥಾಪಿಸುವ ನಿಲುವನ್ನು ಕಾರ್ಯದರ್ಶಿ ರುಬಿಯೊ ಪುನರುಚ್ಚರಿಸಿದ್ದಾರೆ ಎಂದು ಹೇಳಿಕೆಯಲ್ಲಿ ಗಮನಿಸಲಾಗಿದೆ.

ಭವಿಷ್ಯದ ಸಂಘರ್ಷಗಳನ್ನು ತಪ್ಪಿಸಲು ಹಾಗೂ ಎರಡೂ ದೇಶಗಳ ನಡುವೆ ರಚನಾತ್ಮಕ ಮಾತುಕತೆ ಪ್ರಾರಂಭಿಸಲು ಅಮೆರಿಕದ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಶುಕ್ರವಾರ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಜೊತೆಗೂ ಈ ವಿಚಾರವಾಗಿ ಮಾತನಾಡಿದ್ದಾರೆ. ಇಂದು ಬೆಳಿಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಜೈಶಂಕರ್​​ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಸಿರುವ ಜೈಶಂಕರ್, ಭಾರತದ ವಿಧಾನವು ಯಾವಾಗಲೂ ಕ್ರಮಬದ್ಧವಾಗಿರುವುದು ಮತ್ತು ಜವಾಬ್ದಾರಿಯುತವಾಗಿದೆ ಹಾಗೂ ಅದು ಇವತ್ತಿಗೂ ಹಾಗೆಯೇ ಉಳಿದಿದೆ ಎಂದು ​​​ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಕುಂಡಿ ಚೂಟಬೇಕು ಜಗಳ ಹಚ್ಚಿ ಬೇಳೆ ಬೇಯಿಸಿಕೊಳ್ಳುವ ದಡ್ಡಣ್ಣ

LEAVE A REPLY

Please enter your comment!
Please enter your name here

error: Content is protected !!