‘ದಹಿ’ ಮಾರ್ಗಸೂಚಿ ಪರಿಷ್ಕರಿಸಿದ FSSAI: ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು ಬಳಕೆಗೆ ಅನುಮತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೊಸರಿನ ಪ್ಯಾಕೆಟ್‌ಗಳ ಮೇಲೆ ಹಿಂದಿಯ ‘ದಹಿ’ ಪದ ಬಳಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​​ಎಸ್​ಎಸ್​ಎಐ) ಎಚ್ಚೆತ್ತುಕೊಂಡಿದ್ದು, ಗುರುವಾರ ತನ್ನ ಮಾರ್ಗಸೂಚಿಯನ್ನು ಪ್ರಾಧಿಕಾರ ಪರಿಷ್ಕರಿಸಿ, ಮೊಸರು ಪ್ಯಾಕೆಟ್‌ಗಳ ಮುದ್ರಿತ ಲೇಬಲ್‌ಗಳಲ್ಲಿ ಪ್ರಾದೇಶಿಕ ಹೆಸರುಗಳನ್ನು ಬಳಸಲು ಅನುಮತಿಸಿದೆ.

ಇದೀಗ ಲೇಬಲ್‌ನಲ್ಲಿನ ಬ್ರಾಕೆಟ್‌ಗಳಲ್ಲಿ ಯಾವುದೇ ಇತರ ಪ್ರಚಲಿತ ಪ್ರಾದೇಶಿಕ ಸಾಮಾನ್ಯ ಹೆಸರಿನ ಜೊತೆಗೆ ‘Curd’ ಪದವನ್ನು ಬಳಸಲು ಅನುಮತಿ ನೀಡಲಾಗಿದೆ. ಉದಾಹರಣೆಗೆ, ‘Curd (ದಹಿ)’ ಅಥವಾ ‘Curd (ಮೊಸರು), ‘Curd (ಝಾಮುತ್ದೌಡ್)’, ‘Curd (ತಾಯಿರ್)’, ‘Curd (ಪೆರುಗು)’ ಅನ್ನು ಬಳಸಬಹುದು ಎಂದು ಎಫ್​​ಎಸ್​ಎಸ್​ಎಐ ಸ್ಪಷ್ಟನೆ ನೀಡಿದೆ.

ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ಇಂಗ್ಲಿಷ್​ನ ಕರ್ಡ್ (Curd) ಪದ ಬಳಕೆ ಜೊತೆಗೆ ಹಿಂದಿಯ ದಹಿ (Dahi) ಪದ ಬಳಕೆ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳು (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆ) ನಿಯಮಗಳು 2011ರಡಿ ಪ್ಯಾಕೆಟ್ ಮೇಲಿನ ‘ದಹಿ’ ಪದ ಬಳಕೆ ಮತ್ತು ಅಚ್ಚು ನಿರ್ಧಾರವನ್ನು ಹಿಂಪಡೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!