ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ 4 ರೂಪಾಯಿ ಹೆಚ್ಚಳ ಮಾಡಲು ಅನುಮತಿ ಸಿಕ್ಕಿದ್ದು, ಈ ಹಿನ್ನೆಲೆ, ಪಶು ಸಂಗೋಪನ ಇಲಾಖೆ ಸಚಿವ ಕೆ ವೆಂಕಟೇಶ್ ಸುದ್ದಿಗೋಷ್ಠಿ ನಡೆಸಿ, ನಂದಿನ ಹಾಲಿನ ಪರಿಷ್ಕೃತ ದರ ಏಪ್ರಿಲ್ 1 ರಿಂದ ಅನ್ವಯ ಆಗಲಿದೆ ಎಂದು ಸ್ಪಷ್ಟನೆ ನೀಡಿದರು.
ಹಾಲಿನ ದರ ಹೆಚ್ಚಳ ಮಾಡಿ 4 ರೂಪಾಯಿ ರೈತರಿಗೆ ಕೊಡಬೇಕು ಎಂದು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಹಾಗಾಗಿ ಏಪ್ರಿಲ್ 1 ರಿಂದ ನಂದಿನಿ ಹಾಲಿನ ಪರಿಷ್ಕೃತ ದರ ಅನ್ವಯವಾಗಲಿದೆ ಎಂದರು.
ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ
ನೀಲಿ ಪ್ಯಾಕೇಟ್ ಹಾಲಿನ ದರ 44 ರೂಪಾಯಿಯಿಂದ 48 ರೂಪಾಯಿಗೆ ಏರಿಕೆ.
ಆರೇಂಜ್ ಪ್ಯಾಕೇಟ್ ನಂದಿನಿ ಹಾಲಿನ ದರ ರೂ.54 ರಿಂದ 58 ರೂಗೆ ಏರಿಕೆ.
ಸಮೃದ್ಧಿ ಪ್ಯಾಕೇಟ್ ನಂದಿನಿ ಹಾಲಿನ ದರ ರೂ.56 ರಿಂದ 60ಕ್ಕೆ ಏರಿಕೆ.
ಗ್ರೀನ್ ಸ್ಪೆಷಲ್ ಹಾಲಿನ ದರ ರೂ.54 ರಿಂದ 58ಕ್ಕೆ ಏರಿಕೆ.
ನಾರ್ಮಲ್ ಗ್ರೀನ್ ಹಾಲಿನ ದರ ರೂ.52ರಿಂದ 56 ರೂಪಾಯಿಗೆ ಹೆಚ್ಚಳ