ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅನ್ನಭಾಗ್ಯ ಯೋಜನೆ ಗೆ ಅಕ್ಕಿ ನೀಡಲು ಛತ್ತೀಸ್‌ಗಢ ಸರ್ಕಾರ ಒಪ್ಪಿದೆ. ಎಷ್ಟು ಕೊಡುತ್ತೇವೆ ಎಂದು ಛತ್ತೀಸ್‌ಗಢ ಸರ್ಕಾರ ತೀರ್ಮಾನಿಸಬೇಕಾಗುತ್ತೆ ಎಂದು ಆಹಾರ ಇಲಾಖೆ ಸಚಿವ ಮುನಿಯಪ್ಪ ಹೇಳಿದರು.
ಅನ್ನಭಾಗ್ಯ ಯೋಜನೆಗೆ ಅಕ್ಕಿ ವ್ಯವಸ್ಥೆ ಮಾಡುವ ಸಂಬಂಧ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. . ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪತ್ರ ವ್ಯವಹಾರ ಮಾಡುವಂತೆ ಸಿಎಸ್‌ಗೆ ಸೂಚನೆ ನೀಡಿದ್ದೇವೆ. ಓಪನ್ ಮಾರ್ಕೆಟ್‌ನಲ್ಲಿ ಅಕ್ಕಿಯನ್ನು ಖರೀದಿಸಲ್ಲ. NCCF ಸೇರಿ ಕೇಂದ್ರ ಸ್ವಾಯತ್ತ ಸಂಸ್ಥೆಗಳ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.
2 ಮಾರ್ಗಗಳ ಮೂಲಕ ಅಕ್ಕಿ ಖರೀದಿ ಮಾಡುವ ಕೆಲಸ ಮಾಡುತ್ತಿದ್ದೇವೆ. ನಾನು ಬೇರೆ ರಾಜ್ಯದ ಪ್ರವಾಸ ಕೈಗೊಳ್ಳುವ ಅಗತ್ಯತೆ ಇಲ್ಲ. ಸಿಎಸ್‌ರವರೇ ಛತ್ತೀಸ್‌ಗಢದಿಂದ ಅಕ್ಕಿ ಖರೀದಿಸುವ ಕೆಲಸ ಮಾಡುತ್ತಾರೆ. ಕೇಂದ್ರ ಸರ್ಕಾರದ ರಾಜಕೀಯದಿಂದ ತಡವಾಗಿದೆ ಅಷ್ಟೇ. ಆದಷ್ಟು ಬೇಗ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದರು.