ಬೆಳಗಿನ ಉಪಾಹಾರ ಅಂದ್ರೆ ನಮ್ಮ ಮನೆಯಲ್ಲೇ ಮೊದಲು ನೆನಪಾಗೋದು ಇಡ್ಲಿ. ಬಿಸಿ ಬಿಸಿ ಇಡ್ಲಿ, ಜೊತೆ ಚಟ್ನಿ ಅಥವಾ ಸಾಂಬಾರ್… ದಿನದ ಆರಂಭಕ್ಕೆ ಇದಕ್ಕಿಂತ ಸರಳವೂ ಆರೋಗ್ಯಕರವೂ ಆದ ಆಯ್ಕೆ ಇನ್ನೊಂದಿಲ್ಲ. ಆದರೆ ಒಂದೇ ಪ್ರಶ್ನೆ ಬಹುತೇಕ ಮಂದಿಯ ಮನಸ್ಸಲ್ಲಿ ಇರುತ್ತದೆ – ಅಕ್ಕಿ ಇಡ್ಲಿ ತಿನ್ನೋದೇ ಉತ್ತಮವಾ? ಅಥವಾ ರವೆ ಇಡ್ಲಿಯೇ ಆರೋಗ್ಯಕ್ಕೆ ಸೂಕ್ತವಾ? ರುಚಿಗಿಂತ ಆರೋಗ್ಯ ಮುಖ್ಯ ಅಂತ ನೋಡಿದ್ರೆ, ಇವೆರಡಕ್ಕೂ ತಮ್ಮದೇ ಆದ ವಿಶೇಷತೆಗಳಿವೆ.
ಅಕ್ಕಿ ಇಡ್ಲಿ – ಸಾಂಪ್ರದಾಯಿಕ ಹಾಗೂ ಲೈಟ್ ಫುಡ್:
ಅಕ್ಕಿ ಇಡ್ಲಿ ಫರ್ಮೆಂಟೇಶನ್ ಪ್ರಕ್ರಿಯೆಯಿಂದ ತಯಾರಾಗುವುದರಿಂದ ಜೀರ್ಣಕ್ರಿಯೆಗೆ ತುಂಬಾ ಸಹಾಯಕ. ಇದರಲ್ಲಿ ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿದ್ದು, ಹೊಟ್ಟೆ ಆರೋಗ್ಯವನ್ನು ಸುಧಾರಿಸುತ್ತದೆ. ಸುಲಭವಾಗಿ ಜೀರ್ಣವಾಗುವ ಕಾರಣ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯದಿಂದ ಚೇತರಿಸುತ್ತಿರುವವರಿಗೆ ಇದು ಒಳ್ಳೆಯ ಆಯ್ಕೆ. ಆದರೆ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚು ಇರುವುದರಿಂದ ಮಿತವಾಗಿ ಸೇವಿಸುವುದು ಉತ್ತಮ.
ಇದನ್ನೂ ಓದಿ: Snacks | ಟೀ ಜೊತೆ ತಿನ್ನೋಕೆ ಹ್ಯಾಶ್ ಬ್ರೌನ್ ಗಿಂತ ಪರ್ಫೆಕ್ಟ್ ಸ್ನ್ಯಾಕ್ ಬೇಕಾ ಹೇಳಿ?
ರವೆ ಇಡ್ಲಿ – ಕ್ವಿಕ್ & ಫಿಲ್ಲಿಂಗ್ ಫುಡ್:
ರವೆ ಇಡ್ಲಿ ಫರ್ಮೆಂಟ್ ಆಗದೆ ತಯಾರಾಗುತ್ತದೆ ಮತ್ತು ಅಕ್ಕಿ ಇಡ್ಲಿಗಿಂತ ಬೇಗ ಹೊಟ್ಟೆ ತುಂಬುವ ಆಹಾರ. ರವೆ ಸ್ವಲ್ಪ ಫೈಬರ್ ಹೊಂದಿರುವುದರಿಂದ ಹೊಟ್ಟೆ ತುಂಬಿದ ಅನುಭವ ಹೆಚ್ಚು ಹೊತ್ತು ಇರುತ್ತದೆ. ತೂಕ ನಿಯಂತ್ರಣ ಮಾಡಿಕೊಳ್ಳುವವರಿಗೆ ಇದು ಉಪಯುಕ್ತ. ಆದರೆ ಕೆಲವರಿಗೆ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಬಹುದು.
ಆರೋಗ್ಯದ ದೃಷ್ಟಿಯಿಂದ ಯಾವುದು ಬೆಸ್ಟ್ ಗೊತ್ತಾ?:
ಸಾಮಾನ್ಯ ಜೀರ್ಣಶಕ್ತಿ ಮತ್ತು ಸಾಂಪ್ರದಾಯಿಕ ಆಹಾರ ಬೇಕಾದ್ರೆ ಅಕ್ಕಿ ಇಡ್ಲಿ ಉತ್ತಮ. ತೂಕ ಕಡಿಮೆ ಮಾಡೋ ಯತ್ನದಲ್ಲಿದ್ದರೆ ಅಥವಾ ಬೇಗ ತಯಾರಾಗುವ ಉಪಾಹಾರ ಬೇಕಾದ್ರೆ ರವೆ ಇಡ್ಲಿ ಸೂಕ್ತ. ಮುಖ್ಯವಾಗಿ ಯಾವ ಇಡ್ಲಿಯಾದರೂ ಸಾಂಬಾರ್, ತರಕಾರಿ ಚಟ್ನಿಯ ಜೊತೆ ಸೇವಿಸಿದ್ರೆ ಅದರ ಪೌಷ್ಟಿಕ ಮೌಲ್ಯ ಇನ್ನಷ್ಟು ಹೆಚ್ಚುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

