ಮಳೆಗಾಲದ ತಂಪಾದ ವಾತಾವರಣದಲ್ಲಿ ಬಿಸಿ ಬಿಸಿ ರೈಸು ಬಾತ್ ತಿನ್ನೋ ಆಸೆ ಯಾರಿಗಿಲ್ಲ ಹೇಳಿ! ಅಷ್ಟೇ ಅಲ್ಲ, ಕ್ಯಾಪ್ಸಿಕಂ ಬಳಸಿ ಮಾಡುವ ಈ ಬಾತ್ ರುಚಿಯಲ್ಲೂ, ಆರೋಗ್ಯದಲ್ಲೂ ಉತ್ತಮ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ “ಕ್ಯಾಪ್ಸಿಕಂ ಬಾತ್” ಬ್ರೇಕ್ ಫಾಸ್ಟ್ ಗೆ ಬೆಸ್ಟ್.
ಬೇಕಾಗುವ ಸಾಮಗ್ರಿಗಳು:
ಅನ್ನ – 2 ಕಪ್
ಈರುಳ್ಳಿ – 1
ಹಸಿಮೆಣಸು – 3
ಶುಂಠಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು – ಸ್ವಲ್ಪ
ಸಾಸಿವೆ – 1 ಚಮಚ
ಉದ್ದಿನ ಬೇಳೆ – ½ ಚಮಚ
ಅರಶಿಣ – ¼ ಚಮಚ
ಕ್ಯಾಪ್ಸಿಕಂ – 1 ದೊಡ್ಡದು
ಟೊಮೆಟೊ – 1
ಗರಮ್ ಮಸಾಲಾ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಉದ್ದಿನ ಬೇಳೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ. ನಂತರ ಹೆಚ್ಚಿದ ಈರುಳ್ಳಿ, ಟೊಮೆಟೊ, ಅರಶಿಣ ಮತ್ತು ಗರಮ್ ಮಸಾಲಾ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಈಗ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ ಸೇರಿಸಿ, ಬಾಣಲೆಗೆ ಮುಚ್ಚಳಿಟ್ಟು 5 ನಿಮಿಷ ಬೇಯಲು ಬಿಡಿ.
ಬಳಿಕ ಬೇಯಿಸಿದ ಅನ್ನ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಸ್ವಲ್ಪ ಹೊತ್ತು ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ.

