Sunday, November 2, 2025

Rice series 13 | ಚಳಿಯ ವಾತಾವರಣಕ್ಕೆ ಬಿಸಿಬಿಸಿ ಪೆಪ್ಪರ್ ರೈಸ್ ಸೂಪರ್ ಕಾಂಬಿನೇಶನ್!

ಕಾಳುಮೆಣಸಿನ ಸುವಾಸನೆ, ತುಪ್ಪದ ಘಮ, ಮತ್ತು ಬಿಸಿ ಬಿಸಿ ಅನ್ನ ಎಲ್ಲವೂ ಸೇರಿ ಅದ್ಭುತವಾದ ಪೆಪ್ಪರ್ ರೈಸ್ ತಯಾರಾಗುತ್ತೆ. ಈ ರೆಸಿಪಿ ಮಾಡೋದು ತುಂಬಾ ಈಸಿ, ಅಡುಗೆಗೆ ಹೆಚ್ಚು ಸಮಯ ಬೇಕಾಗೋದಿಲ್ಲ, ಆದರೆ ರುಚಿ ಮಾತ್ರ ಸೂಪರ್!

ಬೇಕಾಗುವ ಪದಾರ್ಥಗಳು:

ಅನ್ನ – 1 ಕಪ್
ತುಪ್ಪ – 2 ಟೀ ಸ್ಪೂನ್
ಕಾಳುಮೆಣಸು ಪುಡಿ – 1 ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಬೇವು – 6-8 ಎಲೆಗಳು
ಒಣಮೆಣಸಿನಕಾಯಿ – 1
ಗೋಡಂಬಿ – 5-6
ಸಾಸಿವೆ – ½ ಟೀ ಸ್ಪೂನ್

ತಯಾರಿಸುವ ವಿಧಾನ:

ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಿರಿ. ನಂತರ ಗೋಡಂಬಿ ಸೇರಿಸಿ ಸ್ವಲ್ಪ ಬಣ್ಣ ಬದಲಾದವರೆಗೆ ಹುರಿಯಿರಿ. ಈಗ ಕಾಳುಮೆಣಸಿನ ಪುಡಿ ಸೇರಿಸಿ ತಕ್ಷಣ ಬೇಯಿಸಿದ ಅನ್ನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಉಪ್ಪು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ 2 ನಿಮಿಷ ಬೇಯಿಸಿ.

error: Content is protected !!