ಅಡುಗೆ ಮನೆಯಲ್ಲಿ ತೆಂಗಿನಕಾಯಿ ಇದ್ದರೆ ಸಾಕು, ಅದರಿಂದ ರುಚಿಯಾದ ಕೊಕೊನಟ್ ರೈಸ್ ತಯಾರಿಸಲು ಕೇವಲ ಕೆಲವು ನಿಮಿಷಗಳೇ ಸಾಕು. ದಕ್ಷಿಣ ಭಾರತದ ಪಾರಂಪರಿಕ ತಿನಿಸಾದ ಈ ಕೊಕೊನಟ್ ರೈಸ್, ಬೆಳಗಿನ ಉಪಹಾರಕ್ಕೆ ಅಥವಾ ಮಧ್ಯಾಹ್ನದ ಊಟಕ್ಕೂ ಸೂಕ್ತ.
ಬೇಕಾಗುವ ಪದಾರ್ಥಗಳು:
ಅಕ್ಕಿ – 1 ಕಪ್
ತೆಂಗಿನ ತುರಿ – 1 ಕಪ್
ಎಣ್ಣೆ ಅಥವಾ ತುಪ್ಪ – 2 ಟೀ ಸ್ಪೂನ್
ಸಾಸಿವೆ – 1 ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕಡಲೆ ಬೇಳೆ – 1 ಟೀ ಸ್ಪೂನ್
ಒಣ ಮೆಣಸಿನಕಾಯಿ – 2
ಕರಿಬೇವು – ಸ್ವಲ್ಪ
ಹಸಿಮೆಣಸು – 2
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಅಕ್ಕಿಯನ್ನು ಬೇಯಿಸಿ ತಣ್ಣಗಾಗಲು ಬಿಡಿ.
ಒಂದು ಪ್ಯಾನ್‌ನಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿಯಾಗಲು ಬಿಡಿ, ಅದಕ್ಕೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಮೆಣಸು ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ. ನಂತರ ಹಸಿಮೆಣಸು ಹಾಗೂ ತೆಂಗಿನ ತುರಿಯನ್ನು ಸೇರಿಸಿ ಒಂದು ನಿಮಿಷ ಹುರಿಯಿರಿ. ಈಗ ಬೇಯಿಸಿದ ಅನ್ನವನ್ನು ಹಾಕಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ 2–3 ನಿಮಿಷ ಹುರಿದರೆ ರುಚಿಯಾದ ಕೊಕೊನಟ್ ರೈಸ್ ಸಿದ್ಧ!

