ಬಿರಿಯಾನಿ ಅಂದ್ರೆ ಆಹಾರ ಪ್ರಿಯರ ಹೃದಯ ಗೆದ್ದ ತಿಂಡಿ. ಬಾಸ್ಮತಿ ಅಕ್ಕಿ, ಮಸಾಲೆಗಳ ರುಚಿ, ತುಪ್ಪದ ಸುವಾಸನೆ ಇವೆಲ್ಲ ಸೇರಿ ಬಿರಿಯಾನಿಗೆ ಒಂದು ವಿಶೇಷ ಸವಿರುಚಿ ಕೊಡುತ್ತವೆ. ನಾನ್ ವೆಜ್ ತಿನ್ನದವರು ಕೂಡಾ ಬಿರಿಯಾನಿ ರೈಸ್ ಸವಿದು ಆನಂದಿಸಬಹುದು.
ಬೇಕಾಗುವ ಸಾಮಗ್ರಿಗಳು:
ಬಾಸ್ಮತಿ ಅಕ್ಕಿ – 1 ಕಪ್
ನೀರು – 2 ಕಪ್
ಕ್ಯಾರಟ್ – ½ ಕಪ್
ಬಟಾಣಿ – ¼ ಕಪ್
ಬೀನ್ಸ್ – ¼ ಕಪ್
ಈರುಳ್ಳಿ – 1
ಟೊಮಾಟೊ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಹಸಿಮೆಣಸು – 2
ಗರಂ ಮಸಾಲಾ – ½ ಟೀ ಸ್ಪೂನ್
ಬೇ ಲೀಫ್, ಲವಂಗ, ದಾಲ್ಚಿನ್ನಿ, ಏಲಕ್ಕಿ – ಬೇಕಾದಷ್ಟು
ತುಪ್ಪ ಅಥವಾ ಎಣ್ಣೆ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು ಮತ್ತು ಪುದೀನ ಸೊಪ್ಪು – ಅಲಂಕರಿಸಲು
ಮಾಡುವ ವಿಧಾನ:
ಮೊದಲು ಅಕ್ಕಿಯನ್ನು 20 ನಿಮಿಷ ನೆನೆಸಿ ಇಡಿ.
ಕಾದ ಬಾಣಲೆಗೆ ತುಪ್ಪ ಅಥವಾ ಎಣ್ಣೆ ಹಾಕಿ, ಬೇ ಲೀಫ್, ಲವಂಗ, ಏಲಕ್ಕಿ, ದಾಲ್ಚಿನ್ನಿ ಹಾಕಿ ಸುವಾಸನೆ ಬರುವವರೆಗೆ ಹುರಿಯಿರಿ. ನಂತರ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ಈಗ ಟೊಮಾಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಹಾಗೂ ಗರಂ ಮಸಾಲಾ ಸೇರಿಸಿ ಕಲಸಿ ಬೇಯಿಸಿ.
ತರಕಾರಿಗಳು ಸೇರಿಸಿ ಒಂದು ನಿಮಿಷ ಹುರಿಯಿರಿ. ಈಗ ನೀರು ಮತ್ತು ಉಪ್ಪು ಸೇರಿಸಿ ಕುದಿಸಿ. ನಂತರ ನೆನೆಸಿದ ಅಕ್ಕಿ ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ. ನೀರು ಒಣಗಿದ ಮೇಲೆ ಗ್ಯಾಸ್ ಆಫ್ ಮಾಡಿ, 5 ನಿಮಿಷ ಮುಚ್ಚಿ ಇಡಿ.

