ಬೆಳಿಗ್ಗೆ ತ್ವರಿತವಾಗಿ ಸಿದ್ಧವಾಗುವ, ಆದರೆ ಸಖತ್ ರುಚಿ ಕೊಡುವ ವಾನು ತಿಂಡಿ ಬೇಕಂದ್ರೆ ಚನಾ ಪುಲಾವ್ ಒಳ್ಳೆಯ ಆಯ್ಕೆ. ಅಡುಗೆಗೆ ಹೆಚ್ಚು ಸಮಯ ಬೇಕಿಲ್ಲ, ಪ್ರೋಟೀನ್ ಜಾಸ್ತಿ, ರುಚಿ ಕೂಡ ಇದೆ… ಒಮ್ಮೆ ಮಾಡಿದ್ರೆ ಮತ್ತೆ ಮತ್ತೆ ಮಾಡಿ ತಿಂತೀರಾ.
ಬೇಕಾಗುವ ಪದಾರ್ಥಗಳು
ಬಾಸ್ಮತಿ ಅಕ್ಕಿ – 1 ಕಪ್
ಬೇಯಿಸಿದ ಕಾಬುಲ್ ಕಡ್ಲೆ ಅಥವಾ ಚನಾ – 1 ಕಪ್
ಈರುಳ್ಳಿ – 1
ಟೊಮ್ಯಾಟೋ – 1
ಹಸಿಮೆಣಸು – 2
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಗರಂ ಮಸಾಲೆ – 1 ಟೀಸ್ಪೂನ್
ಧನಿಯಾ – ಸ್ವಲ್ಪ
ಏಲಕ್ಕಿ – 2
ಲವಂಗ – 3
ಪಲಾವ್ ಎಲೆ – 1
ಎಣ್ಣೆ / ತುಪ್ಪ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – 2 ಕಪ್
ತಯಾರಿಸುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಏಲಕ್ಕಿ, ಲವಂಗ, ಪಲಾವ್ ಎಲೆ ಹಾಕಿ ಹುರಿಯಿರಿ. ಈಗ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಸ್ವಲ್ಪ ಗೋಲ್ಡನ್ ಬಣ್ಣ ಬರೋವರೆಗೂ ಹುರಿಯಿರಿ. ಬಳಿಕ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸು ಹಾಕಿ ಚೆನ್ನಾಗಿ ಕಲಸಿ. ಟೊಮ್ಯಾಟೋ ಹಾಕಿ ಬೇಯಿಸಿ.
ಈಗ ಬೇಯಿಸಿದ ಚನಾ ಸೇರಿಸಿ ಮಸಾಲೆ ಜೊತೆ ಚೆನ್ನಾಗಿ ಮಿಶ್ರಣ ಮಾಡಿ. ಅಕ್ಕಿಯನ್ನು ತೊಳೆದು ನೀರು ಬಸಿದು ಲೈಟ್ ಆಗಿ ಹುರಿಯಿರಿ. ನಂತರ ಗರಂ ಮಸಾಲೆ, ಉಪ್ಪು, 2 ಕಪ್ ನೀರು ಸೇರಿಸಿ ಸ್ವಲ್ಪ ಮಿಶ್ರಣ ಮಾಡಿ.
ಮುಚ್ಚಳ ಹಾಕಿ ಮಧ್ಯಮ ಉರಿಯಲ್ಲಿ 10–12 ನಿಮಿಷ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ.

