Friday, January 9, 2026

Rice series 34 | ಫ್ಲೇವರ್ ಫುಲ್ ಖಾರ ರೈಸ್ ಬಾತ್; ನೀವೂ ಒಮ್ಮೆ ಟ್ರೈ ಮಾಡಿ

ಬೆಳಗಿನ ಉಪಹಾರಕ್ಕೆ ಸಿಂಪಲ್ ಆಗಿ, ಆದರೆ ಜಾಸ್ತಿ ರುಚಿ ಕೊಡೋ ಡಿಶ್ ಹುಡುಕುತ್ತಿದ್ದರೆ ಖಾರ ರೈಸ್ ಬಾತ್ ಸೂಪರ್ ಆಯ್ಕೆ. ಹೋಟೆಲ್ ಸ್ಟೈಲ್ ಫ್ಲೇವರ್ ನಲ್ಲಿ ಬೇಗ ತಯಾರಾಗೋ ರೆಸಿಪಿ ಇದು. ಇದನ್ನ ಒಮ್ಮೆ ಮಾಡಿದ್ರೆ ಮತ್ತೆ ಮತ್ತೆ ಮಾಡ್ತೀರಾ.

ಬೇಕಾಗುವ ಸಾಮಗ್ರಿಗಳು:

ಅನ್ನ – 1 ಕಪ್
ಈರುಳ್ಳಿ – 1
ಟೊಮಾಟೋ – 1
ಕ್ಯಾಪ್ಸಿಕಂ – ½
ಬಟಾಣಿ – ¼ ಕಪ್
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 tsp
ಅರಶಿನ – ¼ tsp
ಸಾಂಬಾರ್ ಪೌಡರ್ ಅಥವಾ ರೈಸ್ ಬಾತ್ ಮಸಾಲಾ – 1 tbsp
ಎಣ್ಣೆ – 2 tbsp
ಕೊತ್ತಂಬರಿ – ಸ್ವಲ್ಪ
ಉಪ್ಪು – ರುಚಿಗೆ
ಸಾಸಿವೆ – ½ tsp
ಜೀರಿಗೆ – ½ tsp
ಉದ್ದಿನ ಬೇಳೆ – ½ tsp
ಕರಿಬೇವು – ಸ್ವಲ್ಪ

ಮಾಡುವ ವಿಧಾನ:

ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಹಾಗೂ ಕರಿಬೇವು, ಈರುಳ್ಳಿ, ಹಸಿಮೆಣಸನ್ನು ಹಾಕಿ ಹುರಿದುಕೊಳ್ಳಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ವಾಸನೆ ಹೋಗುವಷ್ಟು ಬೇಯಿಸಿ. ಟೊಮಾಟೋ, ಕ್ಯಾಪ್ಸಿಕಂ, ಬಟಾಣಿ ಸೇರಿಸಿ ಮೃದುವಾಗುವಷ್ಟು ಬೇಯಿಸಿ.

ಈಗ ಅರಶಿನ ಹುಡಿ, ಸಾಂಬಾರ್ ಪೌಡರ್/ರೈಸ್ ಬಾತ್ ಮಸಾಲಾ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 2-3 ನಿಮಿಷ ಮುಚ್ಚಿ ಬೇಯಿಸಿ. ಅದಕ್ಕೆ ಅನ್ನ ಹಾಕಿ ನಿಧಾನವಾಗಿ ಮಿಕ್ಸ್ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ಸ್ ಆಫ್ ಮಾಡಿ. ಬಿಸಿ ಬಿಸಿ ಖಾರ ರೈಸ್ ಬಾತ್ ಸಿದ್ಧ!

error: Content is protected !!