ಖಾರಾ–ಸಿಹಿ ರುಚಿಯ, ಕೆಲವೇ ನಿಮಿಷಗಳಲ್ಲಿ ತಯಾರಾಗುವ ಪನೀರ್ ಫ್ರೈಡ್ ರೈಸ್ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವಂತಹ ಸರಳ ಹಾಗೂ ಟೇಸ್ಟಿ ಖಾದ್ಯ. ಉಳಿದ ಅನ್ನ ಇದ್ದಾಗ ಅಥವಾ ಏನಾದರೂ ಸ್ಪೆಷಲ್ ಆಗಿ ಬೇಗ ತಯಾರಿಸಬೇಕು ಅನ್ನಿಸಿದಾಗ ಈ ಪನೀರ್ ಫ್ರೈಡ್ ರೈಸ್ ಒಳ್ಳೆಯ ಆಯ್ಕೆ.
ಬೇಕಾಗುವ ಸಾಮಗ್ರಿಗಳು
ಬಾಸ್ಮತಿ ಅನ್ನ – 2 ಕಪ್ (ಮೊದಲು ಬೇಯಿಸಿಕೊಂಡುದು)
ಪನೀರ್ ಕ್ಯೂಬ್‌ಗಳು – 1 ಕಪ್
ಎಣ್ಣೆ – 2 ಟೇಬಲ್‌ಸ್ಪೂನ್
ಬೆಣ್ಣೆ – 1 ಟೇಬಲ್‌ಸ್ಪೂನ್
ಬೆಳ್ಳುಳ್ಳಿ – 1 ಟೇಬಲ್‌ಸ್ಪೂನ್ (ಸಣ್ಣಗೆ ಕತ್ತರಿಸಿದ)
ಹಸಿರು ಮೆಣಸು – 2 (ಸಣ್ಣಗೆ ತುಂಡರಿಸಿದದು)
ಈರುಳ್ಳಿ – 1 (ಸ್ಲೈಸ್ ಮಾಡಿದದು)
ಕ್ಯಾರೆಟ್ – ½ ಕಪ್
ಬೀನ್ಸ್ – ½ ಕಪ್
ಕ್ಯಾಪ್ಸಿಕಂ – ½ ಕಪ್
ಸೋಯಾ ಸಾಸ್ – 2 ಟೀಸ್ಪೂನ್
ವಿನೆಗರ್ – 1 ಟೀಸ್ಪೂನ್
ಮೆಣಸಿನ ಪುಡಿ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸ್ಪ್ರಿಂಗ್ ಈರುಳ್ಳಿ – ಸಜ್ಜಿಗಾಗಿ
ಮಾಡುವ ವಿಧಾನ
ಮೊದಲು ಪ್ಯಾನ್ ನಲ್ಲಿ 1 ಟೇಬಲ್‌ಸ್ಪೂನ್ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಪನ್ನೀರ್ ಕ್ಯೂಬ್‌ಗಳನ್ನು ಸ್ವಲ್ಪ ಗೋಲ್ಡನ್ ಕಲರ್ ಬರುವವರೆಗೆ ಫ್ರೈ ಮಾಡಿ ಇಡಿ. ಅದೇ ಪ್ಯಾನ್‌ಗೆ ಉಳಿದ ಎಣ್ಣೆ ಮತ್ತು ಬೆಣ್ಣೆ ಹಾಕಿ, ಬೆಳ್ಳುಳ್ಳಿ ಹಾಗೂ ಹಸಿರು ಮೆಣಸು ಹಾಕಿ ಫ್ರೈ ಮಾಡಿ. ನಂತರ ಈರುಳ್ಳಿ ಸೇರಿಸಿ ಸ್ವಲ್ಪ ಸಾಫ್ಟ್ ಆಗುವವರೆಗೆ ಹುರಿಯಿರಿ. ಈಗ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಸೇರಿಸಿ 2–3 ನಿಮಿಷ ಹೈ ಫ್ಲೇಮ್‌ನಲ್ಲಿ ಫ್ರೈ ಮಾಡಬೇಕು.
ತರಕಾರಿಗಳು ಕ್ರಂಚಿಯಾದ ಬಳಿಕ ಸೋಯಾ ಸಾಸ್, ವಿನೆಗರ್, ಮೆಣಸಿನ ಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬೇಯಿಸಿದ ಅನ್ನವನ್ನು ಸೇರಿಸಿ ನಿಧಾನವಾಗಿ ಕಲಸಿ. ಈಗ ಫ್ರೈ ಮಾಡಿದ ಪನ್ನೀರ್ ಸೇರಿಸಿ ಮತ್ತೊಮ್ಮೆ ನಿಧಾನವಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಸ್ಪ್ರಿಂಗ್ ಈರುಳ್ಳಿ ಹಾಕಿ 1 ನಿಮಿಷ ಹೈ ಫ್ಲೇಮ್‌ನಲ್ಲಿ ಟಾಸ್ ಮಾಡಿ ಗ್ಯಾಸ್ ಆಫ್ ಮಾಡಿ.

