Saturday, December 6, 2025

Rice series 49 | ವಿಶಿಷ್ಟ ರುಚಿಯ ಸಿಹಿಗೆಣಸಿನ ರೈಸ್ ಬಾತ್: ಒಮ್ಮೆ ತಿಂದು ನೋಡಿ!

ಬ್ರೇಕ್ ಫಾಸ್ಟ್ ಗೆ ಸ್ವಲ್ಪ ವಿಭಿನ್ನ, ಆರೋಗ್ಯಕರ ಮತ್ತು ರುಚಿಯಾದ ತಿಂಡಿ ಬೇಕೆಂದು ಅನಿಸಿದಾಗ Sweet Potato Rice ಒಂದು ಬೆಸ್ಟ್ ಆಯ್ಕೆ. ಇದನ್ನು ತಯಾರಿಸಲು ಹೆಚ್ಚು ಸಮಯ ಬೇಡ, ಒಂದೇ ಪಾತ್ರೆಯಲ್ಲಿ ತ್ವರಿತವಾಗಿ ಮಾಡಬಹುದಾದ ಕಾರಣ ಬ್ಯುಸಿಯಾದ ದಿನಗಳಿಗೂ ಇದು ಸೂಕ್ತ.

ಆವಶ್ಯಕ ಸಾಮಗ್ರಿಗಳು:

ಅಕ್ಕಿ – 1 ಕಪ್
ಸಿಹಿ ಗೆಣಸು– 1 ದೊಡ್ಡದು (ಕ್ಯೂಬ್ ಮಾಡಿ)
ಈರುಳ್ಳಿ – 1
ಟೊಮ್ಯಾಟೊ – 1
ಹಸಿಮೆಣಸು – 2
ಅಡುಗೆ ಎಣ್ಣೆ – 2 ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಅರಿಶಿನ – ¼ ಟೀಸ್ಪೂನ್
ಮೆಣಸಿನಪುಡಿ – 1 ಟೀಸ್ಪೂನ್
ಗರಂ ಮಸಾಲಾ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಕೊತ್ತಂಬರಿಸೊಪ್ಪು – ಸ್ವಲ್ಪ
ನೀರು – ಅಗತ್ಯಕ್ಕೆ

ತಯಾರಿಕಾ ವಿಧಾನ:

ಮೊದಲಿಗೆ ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಸಿಡಿ. ಪ್ಯಾನ್ನಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ, ಈರುಳ್ಳಿ, ಹಸಿಮೆಣಸು ಸೇರಿಸಿ ಸ್ವಲ್ಪ ಬೇಯಲು ಬಿಡಿ. ಈಗ ಟೊಮ್ಯಾಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.

ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಮೆಣಸಿನಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕತ್ತರಿಸಿದ ಸಿಹಿಗೆಣಸಿನ ತುಂಡುಗಳನ್ನು ಹಾಕಿ 5 ನಿಮಿಷ ಫ್ರೈ ಮಾಡಿ. ನೆನೆಸಿದ ಅಕ್ಕಿಯನ್ನು ಹಾಕಿ, 2 ಕಪ್ ನೀರು ಹಾಕಿ ಮುಚ್ಚಿ ಮಧ್ಯಮ ತಾಪದಲ್ಲಿ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಸರ್ವ್ ಮಾಡಿ.

error: Content is protected !!