Wednesday, December 10, 2025

Rice series 51 | ನುಗ್ಗೆ ಸೊಪ್ಪಿನ ಪಲ್ಯ ತಿಂದಿರ್ತೀರಾ, ಆದ್ರೆ ಚಿತ್ರಾನ್ನ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ

ನುಗ್ಗೆ ಸೊಪ್ಪು ಪೋಷಕಾಂಶಗಳ ಭಂಡಾರ. ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಈ ಸೊಪ್ಪು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದಕ್ಕೆ ಅನ್ನದ ಸವಿಯಾದ ಸ್ಪರ್ಶ ಸೇರಿದರೆ, ಸಿಂಪಲ್ ಆಗಿ ತಯಾರಾಗುವ ಆರೋಗ್ಯಕರ ಚಿತ್ರಾನ್ನ ಸಿದ್ಧವಾಗುತ್ತೆ. ಉಪಹಾರಕ್ಕೆ ಅಥವಾ ಲಂಚ್‌ಬಾಕ್ಸ್‌ಗೆ ಇದು ಬೆಸ್ಟ್ ಆಯ್ಕೆ.

ಅವಶ್ಯಕ ಪದಾರ್ಥಗಳು:

ಅನ್ನ – 2 ಕಪ್
ನುಗ್ಗೆ ಸೊಪ್ಪು – 1 ಕಪ್
ಈರುಳ್ಳಿ – 1
ಹಸಿಮೆಣಸು – 2
ಸಾಸಿವೆ – 1 ಚಮಚ
ಉದ್ದಿನ ಬೇಳೆ – 1 ಚಮಚ
ಕಡಲೆ ಬೇಳೆ – 1 ಚಮಚ
ಕರಿಬೇವು – ಸ್ವಲ್ಪ
ಅರಿಶಿನ – ¼ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ನಿಂಬೆ ರಸ – ಸ್ವಲ್ಪ

ಮಾಡುವ ವಿಧಾನ:

ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸಿಡಿಸಿರಿ. ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಹಸಿಮೆಣಸು, ಕರಿಬೇವು ಹಾಗೂ ಈರುಳ್ಳಿ ಸೇರಿಸಿ ಬಾಡಿಸಿ. ಈಗ ನುಗ್ಗೆ ಸೊಪ್ಪು ಮತ್ತು ಅರಿಶಿನ ಹಾಕಿ 2–3 ನಿಮಿಷ ಫ್ರೈ ಮಾಡಿ. ಸೊಪ್ಪು ಸ್ವಲ್ಪ ಬಾಡಿದ ಮೇಲೆ ಉಪ್ಪು ಸೇರಿಸಿ ಅನ್ನ ಹಾಕಿ ಚೆನ್ನಾಗಿ ಕಲಸಿ. ಕೊನೆಗೆ ನಿಂಬೆ ರಸ ಹಾಕಿ ಮಿಶ್ರಣ ಮಾಡಿ.

ನುಗ್ಗೆ ಸೊಪ್ಪಿನ ಪಲ್ಯ ತಿಂದಿರ್ತೀರಾ, ಆದ್ರೆ ಚಿತ್ರಾನ್ನ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ

error: Content is protected !!