Wednesday, December 10, 2025

Rice series 53 | ಮೆಕ್ಸಿಕನ್ ರೈಸ್! ಸ್ಪೈಸಿ ಫ್ಲೇವರ್‌ಗಳ ಸಿಂಪಲ್ ರೆಸಿಪಿ

ವಿದೇಶಿ ಅಡುಗೆ ಅಂದ್ರೆ ಮಾಡೋದು ಕಷ್ಟ ಅನ್ನೋ ಭಾವನೆ ಬಹುಜನರಿಗೆ ಇರುತ್ತದೆ. ಆದರೆ ಕೆಲವೊಂದು ರೆಸಿಪಿಗಳು ಮನೆಯಲ್ಲೇ ಸುಲಭವಾಗಿ ಮಾಡಿ ಆನಂದಿಸಬಹುದು. ಅಂತಹ ರೆಸಿಪಿಗಳಲ್ಲಿ ಮೆಕ್ಸಿಕನ್ ರೈಸ್ ಒಂದು. ಮಸಾಲೆ ರುಚಿ, ಬಣ್ಣಬಣ್ಣದ ತರಕಾರಿಗಳು, ಸ್ಪೈಸ್ ಫ್ಲೇವರ್‌ಗಳಿಂದ ಈ ರೈಸ್ ತುಂಬಾ ಸ್ಪೆಷಲ್.

ಬೇಕಾಗುವ ಪದಾರ್ಥಗಳು:

ಬೇಯಿಸಿದ ಅನ್ನ – 2 ಕಪ್
ಎಣ್ಣೆ – 2 ಟೀಸ್ಪೂನ್
ಬೆಳ್ಳುಳ್ಳಿ – 1 ಟೇಬಲ್‌ಸ್ಪೂನ್
ಈರುಳ್ಳಿ – 1
ಟೊಮೇಟೋ – 1
ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ – ತಲಾ ¼ ಕಪ್
ಸ್ವೀಟ್ ಕಾರ್ನ್ ಅಥವಾ ರಾಜ್ಮಾ – ½ ಕಪ್
ರೆಡ್ ಚಿಲ್ಲಿ ಪೌಡರ್ – ½ ಟೀಸ್ಪೂನ್
ಜೀರಿಗೆ ಪುಡಿ – ½ ಟೀಸ್ಪೂನ್
ಒರಿಗ್ಯಾನೋ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ:

ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿದ ಬಳಿಕ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಸಾಫ್ಟ್ ಆಗುವವರೆಗೆ ಹುರಿಯಿರಿ. ನಂತರ ಟೊಮೇಟೋ ಸೇರಿಸಿ ಮೃದುವಾಗುವವರೆಗೆ ಬಾಡಿಸಿ. ತರಕಾರಿಗಳು, ಸ್ವೀಟ್ ಕಾರ್ನ್ ಅಥವಾ ರಾಜ್ಮಾ ಸೇರಿಸಿ ಎರಡು–ಮೂರು ನಿಮಿಷ ಬೇಯಿಸಿ.

ಈಗ ಚಿಲ್ಲಿ ಪೌಡರ್, ಜೀರಿಗೆ ಪುಡಿ, ಒರಿಗ್ಯಾನೋ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಬೇಯಿಸಿದ ಅನ್ನ ಸೇರಿಸಿ ಮಿಕ್ಸ್ ಮಾಡಿ. ಕೊನೆಯಲ್ಲಿ ನಿಂಬೆ ರಸ ಹಾಕಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

error: Content is protected !!