Saturday, December 20, 2025

Rice series 63 | ಒನ್ ಪಾಟ್ ಟೊಮೇಟೊ ರೈಸ್ ! ಮಾಡೋದು ತುಂಬಾನೇ ಸುಲಭ

ಬೆಳಗಿನ ಉಪಾಹಾರಕ್ಕೂ, ಮಧ್ಯಾಹ್ನದ ಊಟಕ್ಕೂ ತಯಾರಿಸಿಕೊಳ್ಳಬಹುದಾದ ಸರಳ ಹಾಗೂ ರುಚಿಕರವಾದ ರೈಸ್ ಐಟಂ ಅಂದ್ರೆ ಅದು ಒನ್ ಪಾಟ್ ಟೊಮ್ಯಾಟೋ ರೈಸ್. ಇದು ಒಂದೇ ಪಾತ್ರೆಯಲ್ಲಿ ತಯಾರಾಗೋದ್ರಿಂದ ಸುಮಾರು ಪಾತ್ರೆ ತೊಳೆಯೋ ಜಂಜಾಟ ಇರೋದಿಲ್ಲ.

ಬೇಕಾಗುವ ಸಾಮಗ್ರಿಗಳು:

ಅಕ್ಕಿ – 1 ಕಪ್
ಟೊಮೇಟೊ – 2 ದೊಡ್ಡದು
ಈರುಳ್ಳಿ – 1 (ಸ್ಲೈಸ್ ಮಾಡಿದ್ದು)
ಹಸಿಮೆಣಸಿನಕಾಯಿ – 2
ಬೆಳ್ಳುಳ್ಳಿ – 5 ಕಾಯಿ
ಶುಂಠಿ – 1 ಇಂಚು
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಪಲಾವ್ ಎಲೆ – 1
ಲವಂಗ – 2
ದಾಲ್ಚಿನ್ನಿ – 1 ಚಿಕ್ಕ ತುಂಡು
ಅರಿಶಿನ ಪುಡಿ – ¼ ಟೀ ಸ್ಪೂನ್
ಮೆಣಸಿನ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ನೀರು – 2 ಕಪ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ:

ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಸಿಡಿ. ಈಗ ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ, ಪಲಾವ್ ಎಲೆ, ಲವಂಗ, ದಾಲ್ಚಿನ್ನಿ, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ.

ಈಗ ಟೊಮ್ಯಾಟೋ ಹಾಕಿ ಚೆನ್ನಾಗಿ ಮೆತ್ತಗಾಗುವವರೆಗೆ ಬೇಯಿಸಿ. ಅರಿಶಿನ, ಮೆಣಸಿನ ಪುಡಿ, ಗರಂ ಮಸಾಲಾ, ಉಪ್ಪು ಸೇರಿಸಿ ಮಿಶ್ರಣ ಮಾಡಿ. ಈಗ ನೆನೆಸಿದ ಅಕ್ಕಿ ಹಾಗೂ ನೀರು ಹಾಕಿ ಮುಚ್ಚಿ ಬೇಯಿಸಿ. ಕುಕ್ಕರ್‌ನಲ್ಲಿ 2 ವಿಶಲ್ ಅಥವಾ ಪಾತ್ರೆಯಲ್ಲಿ ನೀರು ಹೀರಿಕೊಳ್ಳುವವರೆಗೆ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ.

error: Content is protected !!