Monday, December 22, 2025

Rice series 65 | ಪುಲಾವ್, ಚಿತ್ರಾನ್ನ ತಿಂದು ಬೋರಾಗಿದ್ರೆ ಗುಜರಾತಿ ಸ್ಟೈಲ್ ಖಿಚಡಿ ಟ್ರೈ ಮಾಡಿ!

ಬೆಳಗಿನ ಉಪಹಾರಕ್ಕೆ ಆರೋಗ್ಯಕರ ಹಾಗೇ ಹೊಟ್ಟೆಗೆ ತೃಪ್ತಿ ನೀಡುವ ತಿಂಡಿ ಅಂದ್ರೆ ಗುಜರಾತಿ ಸ್ಟೈಲ್ ಖಿಚಡಿ. ಅಕ್ಕಿ ಹಾಗೂ ಮೂಂಗ್ ದಾಲ್‌ನ ಈ ಖಿಚಡಿ ಮಾಡೋದು ಸುಲಭ, ತಿನ್ನೋದಕ್ಕೂ ರುಚಿ.

ಅಗತ್ಯ ಪದಾರ್ಥಗಳು:

ಅಕ್ಕಿ – ½ ಕಪ್
ಹಸಿರು ಮೂಂಗ್ ದಾಲ್ – ½ ಕಪ್
ನೀರು – 3–4 ಕಪ್
ತುಪ್ಪ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಇಂಗು – ಒಂದು ಚಿಟಿಕೆ
ಅರಿಶಿನ – ½ ಟೀ ಸ್ಪೂನ್
ಶುಂಠಿ ತುರಿ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಅಕ್ಕಿ ಮತ್ತು ಮೂಂಗ್ ದಾಲ್ ಅನ್ನು ಚೆನ್ನಾಗಿ ತೊಳೆದು 10 ನಿಮಿಷ ನೆನೆಸಿಡಿ. ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಹಾಕಿ. ನಂತರ ಇಂಗು ಮತ್ತು ಶುಂಠಿ ತುರಿ ಸೇರಿಸಿ ಸ್ವಲ್ಪ ಹುರಿಯಿರಿ. ಈಗ ಅರಿಶಿನ ಹಾಕಿ, ನೆನೆಸಿದ ಅಕ್ಕಿ–ದಾಲ್ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿ. ನೀರು ಮತ್ತು ಉಪ್ಪು ಸೇರಿಸಿ ಕುಕ್ಕರ್ ಮುಚ್ಚಿ 3–4 ಸೀಟಿ ಬರುವವರೆಗೆ ಬೇಯಿಸಿ. ಕುಕ್ಕರ್ ತಣ್ಣಗಾದ ಬಳಿಕ ಮುಚ್ಚಳ ತೆರೆದು ಚೆನ್ನಾಗಿ ಕಲಸಿ.

error: Content is protected !!