ಮಶ್ರೂಮ್‌ನ ಮೃದುವಾದ ರುಚಿ, ಬೆಳ್ಳುಳ್ಳಿಯ ಸುಗಂಧ ಮತ್ತು ಬಿಸಿಬಿಸಿ ಅನ್ನ ಸೇರಿದಾಗ ತಯಾರಾಗೋದೇ ಗಾರ್ಲಿಕ್ ಮಶ್ರೂಮ್ ಫ್ರೈಡ್ ರೈಸ್. ಈ ರೈಸ್ ಬೆಳಗಿನ ಊಟಕ್ಕೆ ತುಂಬಾ ಲೈಟ್ ಹಾಗೂ ಎನರ್ಜಿ ನೀಡುವಂತಹದು. ಉಳಿದ ಅನ್ನ ಇದ್ದರೆ ಇನ್ನೂ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಪದಾರ್ಥಗಳು:
ಬೇಯಿಸಿದ ಅನ್ನ – 2 ಕಪ್
ಮಶ್ರೂಮ್ – 1 ಕಪ್
ಬೆಳ್ಳುಳ್ಳಿ – 1 ಟೇಬಲ್ ಸ್ಪೂನ್
ಈರುಳ್ಳಿ – 1 ಮಧ್ಯಮ
ಹಸಿಮೆಣಸು – 1–2 (ಐಚ್ಛಿಕ)
ಸೋಯಾ ಸಾಸ್ – 1 ಟೀ ಸ್ಪೂನ್
ಮೆಣಸಿನ ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ
ಎಣ್ಣೆ / ಬೆಣ್ಣೆ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ತಯಾರಿಸುವ ವಿಧಾನ:
ನ್‌ನಲ್ಲಿ ಎಣ್ಣೆ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ. ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ಬಣ್ಣ ಬರುವವರೆಗೆ ಹುರಿಯಿರಿ. ಈಗ ಈರುಳ್ಳಿ ಮತ್ತು ಹಸಿಮೆಣಸು ಸೇರಿಸಿ ಹುರಿಯಿರಿ. ಜೊತೆಗೆ ಮಶ್ರೂಮ್ ಸೇರಿಸಿ ನೀರು ಬಿಡುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ಈಗ ಉಪ್ಪು, ಮೆಣಸಿನ ಪುಡಿ, ಸೋಯಾ ಸಾಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೇಯಿಸಿದ ಅನ್ನ ಸೇರಿಸಿ ಲೈಟ್గా ಕಲಸಿ 2–3 ನಿಮಿಷ ಹುರಿಯಿರಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ಆಫ್ ಮಾಡಿ.

