ಬೇಕಾಗುವ ಸಾಮಗ್ರಿಗಳು:
ಚಿಕನ್: ಅರ್ಧ ಕೆಜಿ
ಅಕ್ಕಿ: 2 ಕಪ್ (ಬಾಸ್ಮತಿ ಅಥವಾ ಸೋನಾ ಮಸೂರಿ)
ಈರುಳ್ಳಿ: 2 ದೊಡ್ಡದು
ಟೊಮೆಟೊ: 2
ಹಸಿ ಮೆಣಸಿನಕಾಯಿ: 4-5
ಶುಂಠಿ-ಬೆಳ್ಳುಳ್ಳಿ ಪೇಸ್ಟ್: 2 ಚಮಚ
ಮೊಸರು: ಅರ್ಧ ಕಪ್
ಪಲಾವ್ ಎಲೆ ಹಾಗೂ ಗರಂ ಮಸಾಲ ಪದಾರ್ಥಗಳು: (ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು)
ಪುದೀನಾ ಮತ್ತು ಕೊತ್ತಂಬರಿ ಸೊಪ್ಪು: ಒಂದು ಹಿಡಿ
ಎಣ್ಣೆ ಅಥವಾ ತುಪ್ಪ: ಅಗತ್ಯವಿರುವಷ್ಟು
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ:
ಮೊದಲು ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಗೆ ಎಣ್ಣೆ ಮತ್ತು ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ ಸೇರಿಸಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ಈರುಳ್ಳಿ ಬೆಂದ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿ ಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ. ಬಳಿಕ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೂ ಬೇಯಿಸಿ.
ಈಗ ತೊಳೆದಿಟ್ಟ ಚಿಕನ್ ತುಂಡುಗಳನ್ನು ಸೇರಿಸಿ, ಅದಕ್ಕೆ ಸ್ವಲ್ಪ ಅರಿಶಿನ ಮತ್ತು ಉಪ್ಪು ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ನಂತರ ಮೊಸರು, ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
ಚಿಕನ್ ಮಸಾಲೆಯೊಂದಿಗೆ ಬೆರೆತ ನಂತರ, ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಮೆಲ್ಲಗೆ ಕೈಾಡಿಸಿ. ಅಕ್ಕಿಯ ಅಳತೆಗೆ ತಕ್ಕಂತೆ (1 ಕಪ್ ಅಕ್ಕಿಗೆ 2 ಕಪ್ ನೀರು) ಬಿಸಿ ನೀರನ್ನು ಹಾಕಿ.
ರುಚಿಗೆ ತಕ್ಕಷ್ಟು ಉಪ್ಪು ಸರಿಪಡಿಸಿ, ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಬರುವವರೆಗೆ ಬೇಯಿಸಿ. ಕುಕ್ಕರ್ ತಣ್ಣಗಾದ ಮೇಲೆ ಮುಚ್ಚಳ ತೆಗೆದು ಅದಕ್ಕೆ ಸ್ವಲ್ಪ ನಿಂಬೆ ರಸ ಚಿಮುಕಿಸಿದರೆ ಘಮಘಮಿಸುವ ಚಿಕನ್ ಪಲಾವ್ ಸವಿಯಲು ಸಿದ್ಧ!

