ಲಂಚ್ ಬಾಕ್ಸ್‌ಗೋ, ಬ್ರೇಕ್ ಫಾಸ್ಟ್ ಅಥವಾ ಡಿನ್ನರ್‌ಗೂ ಸೂಕ್ತವಾದ ಈ ಕ್ಯಾಬೇಜ್ ರೈಸ್ ರೆಸಿಪಿ ಕಡಿಮೆ ಸಮಯದಲ್ಲಿ ತಯಾರಾಗುತ್ತೆ. ಮಾಡೋದು ಕೂಡ ತುಂಬಾ ಸರಳ.
ಬೇಕಾಗುವ ಸಾಮಗ್ರಿಗಳು:
ಅನ್ನ – 2 ಕಪ್
ಸಣ್ಣದಾಗಿ ಕತ್ತರಿಸಿದ ಕ್ಯಾಬೇಜ್ – 1½ ಕಪ್
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)
ಹಸಿಮೆಣಸು – 1–2 (ಸಣ್ಣದು)
ಶುಂಠಿ – 1 ಟೀಸ್ಪೂನ್ (ತುರಿದದ್ದು)
ಸಾಸಿವೆ – 1 ಟೀಸ್ಪೂನ್
ಜೀರಿಗೆ – ½ ಟೀಸ್ಪೂನ್
ಉದ್ದಿನಬೇಳೆ – 1 ಟೇಬಲ್ ಸ್ಪೂನ್
ಕಡಲೆಬೇಳೆ – 1 ಟೇಬಲ್ ಸ್ಪೂನ್
ಅರಿಶಿನ ಪುಡಿ – ¼ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – 2 ಟೇಬಲ್ ಸ್ಪೂನ್
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ನಿಂಬೆಹಣ್ಣು ರಸ – ಸ್ವಲ್ಪ (ಐಚ್ಛಿಕ)
ತಯಾರಿಸುವ ವಿಧಾನ:
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಹಾಕಿ ನಂತರ ಜೀರಿಗೆ ಸೇರಿಸಿ. ಉದ್ದಿನಬೇಳೆ ಮತ್ತು ಕಡಲೆಬೇಳೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ಈಗ ಕರಿಬೇವು, ಹಸಿಮೆಣಸು ಮತ್ತು ಶುಂಠಿ ಸೇರಿಸಿ ಸ್ವಲ್ಪ ಹುರಿಯಿರಿ.
ಕತ್ತರಿಸಿದ ಈರುಳ್ಳಿ ಹಾಕಿ ಸಾಫ್ಟ್ ಆಗುವವರೆಗೆ ಬೇಯಿಸಿ. ನಂತರ ಕ್ಯಾಬೇಜ್ ಸೇರಿಸಿ, ಅರಿಶಿನ ಮತ್ತು ಉಪ್ಪು ಹಾಕಿ ಮಧ್ಯಮ ಬೆಂಕಿಯಲ್ಲಿ 5–7 ನಿಮಿಷ ಬೇಯಿಸಿ. ಕ್ಯಾಬೇಜ್ ಸ್ವಲ್ಪ ಕ್ರಂಚಿಯಾಗಿದ್ದರೆ ಚೆನ್ನಾಗಿರುತ್ತದೆ.
ಈಗ ಬೇಯಿಸಿದ ಅನ್ನ ಸೇರಿಸಿ, ನಿಧಾನವಾಗಿ ಕಲಸಿ. ಅಗತ್ಯವಿದ್ದರೆ ಸ್ವಲ್ಪ ನಿಂಬೆ ರಸ ಹಾಕಿ ರುಚಿ ಹೆಚ್ಚಿಸಬಹುದು. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿಯಾಗಿ ಸವಿಯಿರಿ.

