ಮನೆಯಲ್ಲೇ ರೆಸ್ಟೋರೆಂಟ್ ರುಚಿ ಕೊಡುವ ಕ್ರ್ಯಾಬ್ ಫ್ರೈಡ್ ರೈಸ್ ನೀವೂ ಒಮ್ಮೆ ಟ್ರೈ ಮಾಡಿ. ರುಚಿ ತುಂಬಾನೇ ಚೆನ್ನಾಗಿರುತ್ತೆ.
ಬೇಕಾಗುವ ಸಾಮಗ್ರಿಗಳು
ಅನ್ನ – 2 ಕಪ್
ಬೇಯಿಸಿದ ಕ್ರ್ಯಾಬ್ ಮಾಂಸ – 1 ಕಪ್
ಈರುಳ್ಳಿ – 1
ಬೆಳ್ಳುಳ್ಳಿ – 1 ಟೀ ಸ್ಪೂನ್
ಹಸಿರು ಮೆಣಸು – 1–2
ಸೋಯಾ ಸಾಸ್ – 1 ಟೇಬಲ್ ಸ್ಪೂನ್
ವಿನೆಗರ್ – 1 ಟೀ ಸ್ಪೂನ್
ಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್
ಸ್ಪ್ರಿಂಗ್ ಅನಿಯನ್ – ಅಲಂಕಾರಕ್ಕೆ
ಮಾಡುವ ವಿಧಾನ:
ಒಂದು ದೊಡ್ಡ ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ ಹಾಗೂ ಹಸಿ ಮೆಣಸು ಹಾಕಿ ಸ್ವಲ್ಪ ಹುರಿಯಿರಿ. ನಂತರ ಈರುಳ್ಳಿ ಸೇರಿಸಿ ಮೃದುವಾಗುವವರೆಗೆ ಫ್ರೈ ಮಾಡಿ. ಈಗ ಬೇಯಿಸಿದ ಕ್ರ್ಯಾಬ್ ಮಾಂಸ ಹಾಕಿ 2–3 ನಿಮಿಷ ನಿಧಾನಕ್ಕೆ ಹುರಿಯಿರಿ. ಇದಕ್ಕೆ ಸೋಯಾ ಸಾಸ್, ವಿನೆಗರ್, ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಕೊನೆಗೆ ಅನ್ನ ಸೇರಿಸಿ, ಅನ್ನ ಮುರಿಯದಂತೆ ನಿಧಾನವಾಗಿ ಕಲಸಿ. 2 ನಿಮಿಷ ಹೈ ಫ್ಲೇಮ್‌ನಲ್ಲಿ ತಿರುಗಿಸಿ ಗ್ಯಾಸ್ ಆಫ್ ಮಾಡಿ. ಮೇಲಿಂದ ಸ್ಪ್ರಿಂಗ್ ಅನಿಯನ್ ಹಾಕಿ ಸರ್ವ್ ಮಾಡಿ.

