ಚಳಿಗಾಲ ಬಂದ್ರೆ ಪ್ರತಿ ಮನೆಯ ಅಡುಗೆಮನೆಗೆ ಅವರೆಕಾಳು ಬರುವದೇ ಖುಷಿ. ಅದರ ಸುವಾಸನೆ, ರುಚಿ ಎರಡೂ ವಿಶೇಷ. ಸಾಮಾನ್ಯ ಚಿತ್ರಾನ್ನಕ್ಕಿಂತ ಸ್ವಲ್ಪ ವಿಭಿನ್ನವಾಗಿ, ಪೋಷಕಾಂಶಗಳನ್ನೂ ಹೊಂದಿರುವ ಈ ಅವರೆಕಾಳು ಚಿತ್ರಾನ್ನ ಬೆಳಗಿನ ಉಪಹಾರಕ್ಕೂ, ಮಧ್ಯಾಹ್ನದ ಲಂಚ್‌ಗೂ ಸೂಕ್ತ.
ಬೇಕಾಗುವ ಪದಾರ್ಥಗಳು:
ಅನ್ನ – 2 ಕಪ್
ಅವರೆಕಾಳು – 1 ಕಪ್
ಹಸಿಮೆಣಸಿನಕಾಯಿ – 2
ಶುಂಠಿ – 1 ಇಂಚು
ನಿಂಬೆ ರಸ – 1–2 ಚಮಚ
ಅರಿಶಿನ ಪುಡಿ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಚಮಚ
ಸಾಸಿವೆ – 1 ಚಮಚ
ಕಡಲೆ ಬೇಳೆ – 1 ಚಮಚ
ಉದ್ದಿನ ಬೇಳೆ – 1 ಚಮಚ
ಕರಿಬೇವು – ಸ್ವಲ್ಪ
ಒಣ ಮೆಣಸಿನಕಾಯಿ – 1
ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ಅವರೆಕಾಳನ್ನು ಸ್ವಲ್ಪ ನೀರಿನಲ್ಲಿ ಮೃದುವಾಗುವವರೆಗೆ ಬೇಯಿಸಿ. ಮಿಕ್ಸಿ ಜಾರ್‌ನಲ್ಲಿ ಹಸಿಮೆಣಸಿನಕಾಯಿ ಮತ್ತು ಶುಂಠಿಯನ್ನು ಸ್ವಲ್ಪ ಅರೆದುಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ. ಇದಕ್ಕೆ ಅರಿಶಿನ ಪುಡಿ ಸೇರಿಸಿ, ನಂತರ ಅರೆದುಕೊಂಡ ಪೇಸ್ಟ್ ಹಾಕಿ ಸ್ವಲ್ಪ ಹುರಿಯಿರಿ. ಈಗ ಬೇಯಿಸಿದ ಅವರೆಕಾಳು ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಅನ್ನ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ಗ್ಯಾಸ್ಆಫ್ ಮಾಡಿದ ಬಳಿಕ ನಿಂಬೆ ರಸ ಸೇರಿಸಿ ಮತ್ತೆ ಒಮ್ಮೆ ಮಿಶ್ರಣ ಮಾಡಿ.

