January 30, 2026
Friday, January 30, 2026
spot_img

Rice series 97 | ಒಮ್ಮೆ ತಿಂದ್ರೆ ಪದೇ ಪದೇ ಮಾಡಿ ತಿಂತೀರ! ಅದೇ ಸ್ಪೆಷಾಲಿಟಿ ಈ ಗೊಂಗುರ ಚಿತ್ರಾನ್ನದ್ದು

ಕೆಲವು ರುಚಿಗಳು ತಿಂದ ತಕ್ಷಣ ಹೊಟ್ಟೆ ತುಂಬಿಸುವುದರ ಜೊತೆಗೆ ಮನಸ್ಸನ್ನೂ ತುಂಬಿಸುತ್ತವೆ.ಇವತ್ತು ಅಂಥಹುದೇ ಒಂದು ಸ್ಪೆಷಲ್ ರುಚಿಯನ್ನು ನಿಮಗೆ ಮಾಡಿ ತೋರಿಸುತ್ತಿದ್ದೇವೆ. ಅದೇ ಹುಳಿ ಖಾರವಾದ ಗೊಂಗುರ ಚಿತ್ರಾನ್ನ.

ಬೇಕಾಗುವ ಸಾಮಗ್ರಿಗಳು

ಅನ್ನ – 2 ಕಪ್
ಗೊಂಗುರ ಸೊಪ್ಪು – 1 ಕಟ್ಟು
ಈರುಳ್ಳಿ – 1
ಹಸಿಮೆಣಸು – 2
ಬೆಳ್ಳುಳ್ಳಿ – 5–6 ಹೂವು
ಸಾಸಿವೆ – 1 ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕಡಲೆಬೇಳೆ – 1 ಟೀ ಸ್ಪೂನ್
ಒಣ ಮೆಣಸು – 2
ಕರಿಬೇವು – ಸ್ವಲ್ಪ
ಅರಿಶಿನ ಪುಡಿ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – 2 ಟೇಬಲ್ ಸ್ಪೂನ್

ಮಾಡುವ ವಿಧಾನ

ಮೊದಲು ಗೊಂಗುರ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಒಣಗಿಸಿ. ನಂತರ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸೊಪ್ಪನ್ನು ಹಾಕಿ 2–3 ನಿಮಿಷ ಸೌತೆ ಮಾಡಿ. ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಒರಟಾಗಿ ಗ್ರೈಂಡ್ ಮಾಡಿ ಇಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಸಿಡಿಯಲು ಬಿಡಿ. ನಂತರ ಉದ್ದಿನ ಬೇಳೆ, ಕಡಲೆಬೇಳೆ, ಒಣ ಮೆಣಸು ಹಾಕಿ ಚಿನ್ನದ ಬಣ್ಣ ಬರೋವರೆಗೂ ಹುರಿಯಿರಿ. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಕರಿಬೇವು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.

ಅರಿಶಿನ ಪುಡಿ, ಉಪ್ಪು ಹಾಕಿ, ಈಗ ಗ್ರೈಂಡ್ ಮಾಡಿದ ಗೊಂಗುರ ಪೇಸ್ಟ್ ಸೇರಿಸಿ 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ.
ಕೊನೆಗೆ ಅನ್ನ ಸೇರಿಸಿ ನಿಧಾನವಾಗಿ ಕಲಸಿ. ಕಡಿಮೆ ಬೆಂಕಿಯಲ್ಲಿ 2–3 ನಿಮಿಷ ಬಿಟ್ಟು ಬಿಡಿ. ಗ್ಯಾಸ್ ಆಫ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !