ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ರಿಶೆಲ್ ಸಾವಿಗೆ ಕಾರಣವಾಗಿದ್ದ ಆರೋಪಿ ಚಿರಾಗ್ ಕೋಠಾರಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕದ್ರಾದ ಕೆಪಿಸಿ ಕಾಲೋನಿಯ ವಿದ್ಯಾರ್ಥಿನಿ ರಿಶೆಲ್ ಡಿಸೋಜಾ ಆತ್ಮ***ತ್ಯೆ ಪ್ರಕರಣ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ್ ಪುತ್ರ ಚಿರಾಗ್ ಕೋಠಾರಕರ್ ಕಿರುಕುಳಕ್ಕೆ ಬೇಸತ್ತೆ ತಮ್ಮ ಮಗಳು ದುರಂತ ಅಂತ್ಯಕಂಡಿದ್ದಾಳೆ ಎಂದು ರಿಶೆಲ್ ತಾಯಿ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದರು. ಇದೀಗ ಪೊಲೀಸರು 20 ದಿನಗ ಬಳಿಕ ಆರೋಪಿ ಚಿರಾಗ್ ಕೋಠಾರಕರ್ ಅರೆಸ್ಟ್ ಮಾಡಿದ್ದಾರೆ.
ರಿಶೆಲ್ ಡಿಸೋಜಾ ಸಾವನ್ನಪ್ಪಿದ ಇತ್ತ ಚಿರಾಗ್ ಕೋಠಾರಕರ್ ನಾಪತ್ತೆಯಾಗಿದ್ದನು. ಕಳೆದ 20 ದಿನಗಳಿಂದ ಪೊಲೀಸರು ಚಿರಾಗ್ ಹುಡುಕಾಟ ಆರಂಭಿಸಿದ್ದರು. ಇತ್ತ ಚಿರಾಕ್ ಉತ್ತರ ಕನ್ನಡದಿಂದ ಪರಾರಿಯಾಗಿ ಚೆನ್ನೈಗೆ ತೆರಳಿದ್ದ. ಚೆನ್ನೈನಲ್ಲಿ ಸಂಬಂಧಿಕರ ಜೊತೆ ತಂಗಿದ್ದ ಚಿರಾಗ್‌ನನ್ನು ಪೊಲೀಸರು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ.
ಪ್ರೀತಿ ಹೆಸರಲ್ಲಿ ಕಿರುಕುಳ ಆರೋಪ
ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಪುತ್ರ ಚಿರಾಗ್ ಕಿರುಕುಳಕ್ಕೆ ಬೇಸತ್ತ ತಮ್ಮ ಮಗಳು ಈ ನಿರ್ಧಾರ ಮಾಡಿದ್ದಾರೆ. ಗಗನಸಖಿ ಕೋರ್ಸ್ ಮುಗಿಸಿ ಬೆಂಗಳೂರಿನಲ್ಲಿ ಶಿಕ್ಷಣ ಮುಂದುವರಿಸಿದ್ದ ಪುತ್ರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ತಾಯಿ ಆರೋಪಿಸಿದ್ದರು. ಪ್ರೀತಿಸುವಂತೆ ಪದೇ ಪದೇ ಪೀಡಿಸುತ್ತಿದ್ದ. ಈ ಕುರಿತು ರಿಶೆಲ್ ಹೇಳಿಕೊಂಡಿದ್ದರು. ಹೀಗಾಗಿ ಸಾಕಷ್ಟು ಬಾರಿ ಪುತ್ರಿಗೆ ಸಮಾಧಾನ ಹೇಳಿದ್ದೇವು ಎಂದು ರಿಶೆಲ್ ತಾಯಿ ಹೇಳಿದ್ದರು.



