ಹೊಸದಿಗಂತ ವರದಿ, ಹುಬ್ಬಳ್ಳಿ:
ಕ್ಲುಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಇನ್ನೊಬ್ಬನಿಗೆ ಕಬ್ಬಿಣದ ಹರಿತವಾದ ವಸ್ತುವಿನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಉಪನಗರ ಪೊಲೀಸ್ ಠಾಣೆಯ ಎದುರು ಗುರುವಾರ ನಡೆದಿದೆ.
ಹಳೇ ಹುಬ್ಬಳ್ಳಿಯ ಕಾಶಿಮ್ ಸಾಬ್(೬೦) ಎಂಬಾತ ಹಲ್ಲೆಗೊಳಗಾಗಿದ್ದಾನೆ. ಮಂಜುನಾಥ ಸ್ವಾಮಿ(೬೨) ಹಲ್ಲೆ ನಡೆಸಿದ್ದಾರೆ. ಕಳೆದ ಎರಡು ದಿನದ ಹಿಂದೆ ಕಾಶಿಮ್ ಮಂಜುನಾಥ್ ಮನೆಯಲ್ಲಿ ಗ್ಯಾಸ್ ತೆಗೆದುಕೊಂಡು ಬಂದಿದ್ದ. ಅದನ್ನು ಮರಳಿ ನೀಡುವ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಆಗ ಸ್ಥಳದಲ್ಲಿದ್ದ ಕಬ್ಬಿನ ವಸ್ತುವಿನಿಂದ ಆತನ ಕೈಗೆ ಹೊಡೆದಿದ್ದಾನೆ. ಈ ಕುರಿತು ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಽಸಿದ್ದಾರೆ.