Thursday, January 8, 2026

ತೆಲಂಗಾಣ ರಾಜಕೀಯದಲ್ಲಿ ಹೊಸ ಪಕ್ಷದ ಉದಯ: BRS ಗೆ ಗುಡ್ ಬೈ, ಹೊಸ ಪಾರ್ಟಿ ಘೋಷಿಸಿದ ಕವಿತಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಉದಯವಾಗಿದ್ದು, ಬಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ, MLC ಕೆ. ಕವಿತಾ ಹೊಸ ಪಕ್ಷ ಘೋಷಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ಇಂದು ಕಣ್ಣೀರಿಟ್ಟು ಭಾವುಕರಾಗಿ ಮಾತನಾಡಿದ ಅವರು, ಕಾಂಗ್ರೆಸ್ ಆರೋಪಿಸುತ್ತಿರುವಂತೆಯೇ ಆಸ್ತಿ ವಿವಾದದಿಂದ ಬಿಆರ್ ಎಸ್ ತೊರೆಯುತ್ತಿಲ್ಲ. ಆದರೆ ಸ್ವಾಭಿಮಾನಕ್ಕಾಗಿ ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ತಿಳಿಸಿದರು.

ಔಪಚಾರಿಕವಾಗಿ ಸದನಕ್ಕೆ ರಾಜೀನಾಮೆ ನೀಡಿ ಬಿಆರ್‌ಎಸ್‌ನಿಂದ ಬೇರ್ಪಟ್ಟರು. 2006 ರಲ್ಲಿ ಕೆಸಿಆರ್ ಮತ್ತು ಪ್ರೊಫೆಸರ್ ಜಯಶಂಕರ್ ಅವರಿಂದ ಪ್ರೇರಿತರಾಗಿ ತೆಲಂಗಾಣ ಚಳವಳಿಗೆ ಸೇರಿದಾಗಿನಿಂದ ಅವರ ರಾಜಕೀಯ ಪ್ರಯಾಣವನ್ನು ವಿವರಿಸುತ್ತಾ, ತೆಲಂಗಾಣ ಹೋರಾಟದಲ್ಲಿ ತಮ್ಮ ಸ್ವತಂತ್ರ ಕೆಲಸವನ್ನು ಒತ್ತಿ ಹೇಳಿದರು.

ತೆಲಂಗಾಣ ಹುತಾತ್ಮರ ಸ್ಮಾರಕದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಜಾಗೃತಿ ರಾಜಕೀಯ ಪಕ್ಷವಾಗಿ ಬೆಳೆಯುತ್ತಿದೆ. ತೆಲಂಗಾಣದ ಜನರಿಗಾಗಿ ನಿಂತು ಹೋರಾಡಿದರೆ, ಅದು ಲೆಕ್ಕ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತದೆ.ಎಡ ಪಕ್ಷದ ಸಹೋದರರು ಮತ್ತು ಪ್ರಜಾಸತ್ತಾತ್ಮಕ ನಿಯಮಗಳಲ್ಲಿ ಕಾರ್ಯನಿರ್ವಹಿಸುವ ಪಕ್ಷ ಬಯಸುವವರು ನನ್ನನ್ನು ಬೆಂಬಲಿಸಿ ಎಂದು ಹೇಳಿದರು.

ಲಕ್ಷ ಗಟ್ಟಲೆ ತೆಲಂಗಾಣ ಕಾರ್ಯಕರ್ತರು ಬಿಆರ್ ಎಸ್ ನಲ್ಲಿ ಗೌರವಯುತ ಸ್ಥಾನ ಪಡೆದಿಲ್ಲ. ಸಾವಿರಾರು ಹುದ್ದೆಗಳು ಅಸ್ತಿತ್ವದಲ್ಲಿವೆ, ಆದರೆ ಅವರಿಗೆ ಯಾವುದೇ ಸ್ಥಾನಗಳು ಸಿಕ್ಕಿಲ್ಲ. ಚಳವಳಿಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಯಾವುದೇ ಅವಕಾಶಗಳು ಸಿಕಿಲ್ಲ ಎಂದರು.

error: Content is protected !!