ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶನದ ಕನ್ನಡ ಸಿನಿಮಾ ‘ಕಾಂತಾರ’ ಇಡೀ ದೇಶಾದ್ಯಂತ ಯಾರ ಬಾಯಲ್ಲಿ ನೋಡಿದ್ರೂ ಈ ಸಿನಿಮಾದ್ದೇ ಮಾತುಕತೆ. ರಿಷಬ್ ಶೆಟ್ಟಿಗೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದು, ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ಭಾರಿ ಬಜೆಟ್ ನಲ್ಲಿ ನಿರ್ಮಿಸಿದೆ. ಕನ್ನಡದಲ್ಲೇ ಬಿಡುಗಡೆಯಾಗಿ ಭಾರೀ ಹಿಟ್ ಆಗಿದ್ದು, ಈ ಸಿನಿಮಾ ಕಳೆದ ವಾರ ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿತ್ತು.
ಈ ಸಿನಿಮಾ ಹಿಂದಿಯಲ್ಲಿ ಒಂದೇ ದಿನದಲ್ಲಿ 5 ಕೋಟಿ ಹಾಗೂ ತೆಲುಗಿನಲ್ಲಿ ಐದು ದಿನದಲ್ಲಿ 22 ಕೋಟಿ ಕಲೆಕ್ಷನ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ತೆಲುಗಿನಲ್ಲಿ ಕಾಂತಾರ ಚಿತ್ರದ ಹಕ್ಕುಗಳನ್ನು ಅಲ್ಲು ಅರವಿಂದ್ 2 ಕೋಟಿಗೆ ಖರೀದಿಸಿ ಬಿಡುಗಡೆ ಮಾಡಿ 10 ಕೋಟಿಗೂ ಹೆಚ್ಚು ಲಾಭ ಗಳಿಸಿದ್ದಾರೆ. ಇದೀಗ ಕಾಂತಾರ ನಾಯಕನ ನಟನೆಗೆ ಬೋಲ್ಡ್ ಆದ ಅಲ್ಲು ಅರವಿಂದ್ ಗೀತಾ ಬ್ಯಾನರ್‌ನಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದಾರೆ.
ಕಾಂತಾರ ಚಿತ್ರ ತೆಲುಗಿನಲ್ಲಿ ಭರ್ಜರಿ ಯಶಸ್ಸು ಸಾಧಿಸಿ ಉತ್ತಮ ಲಾಭ ಗಳಿಸಿದ್ದಕ್ಕೆ ಅಲ್ಲು ಅರವಿಂದ್ ಸಕ್ಸಸ್ ಮೀಟ್ ಆಯೋಜಿಸಿದ್ದರು. ಈ ಸಕ್ಸಸ್ ಮೀಟ್ ನಲ್ಲಿ ಮಾತನಾಡಿದ ಅವರು, ಸಿನಿಮಾಗಳಿಗೆ ಭಾಷೆಯ ಅಡ್ಡಿಯಿಲ್ಲ, ಭಾವನೆಗಳು ಒಂದೇ ಮುಖ್ಯ ಎಂದು ಈ ಸಿನಿಮಾದಿಂದ ಸಾಬೀತಾಯಿತು. ಇದು ಮಣ್ಣಿನಿಂದ ಬಂದ ಕಥೆ. ರಿಮೇಕ್ ಅಲ್ಲ. ರಿಷಬ್ ತಮ್ಮ ಹಳ್ಳಿಯಲ್ಲಿ ನೋಡಿದ ದೃಶ್ಯವನ್ನು ನಮಗೆಲ್ಲಾ ತೋರಿಸಿದ್ದಾರೆ. ಇದು ಅವರ ಮಣ್ಣಿನ ಕಥೆ. ವಿಷ್ಣು ತತ್ವ ಮತ್ತು ರೌದ್ರ ತತ್ತ್ವವಿರುವ ಸಿನಿಮಾ ಇದು.
ಬನ್ನಿ ವಾಸು ನನಗೆ ಈ ಸಿನಿಮಾ ನೋಡುವಂತೆ ಹೇಳಿದ್ರು. ಸಿನಿಮಾ ನೋಡಿದ ಮೇಲೆ ತೆಲುಗಿನಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದೆ. ಇಲ್ಲಿ ಬಳಸಿರುವ ಸಂಗೀತ ಅದ್ಭುತವಾದದ್ದು. ಜಾತ್ರೆಯ ಮೂಲ ಶಬ್ದಗಳನ್ನು ರೆಕಾರ್ಡ್ ಮಾಡಿ ಸಂಗೀತ ಸಂಯೋಜನೆ ಮಾಡಲಾಗಿದೆ ಎಂದು ಹೇಳಿದಾಗ ನನಗೆ ತುಂಬಾ ಆಶ್ಚರ್ಯವಾಯಿತು. ನಾಯಕನ ಅಭಿನಯ ಇಷ್ಟಪಟ್ಟು ಈ ಸಿನಿಮಾವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದೆ. ಸಿನಿಮಾ ತುಂಬಾ ಯಶಸ್ವಿಯಾಗಿದೆ. ಗೀತಾ ಆರ್ಟ್ಸ್‌ನಲ್ಲಿ ಸಿನಿಮಾ ಮಾಡುವಂತೆ ರಿಷಬ್‌ಗೆ ಹೇಳಿದ್ದೆ. ರಿಷಬ್ ಕೂಡ ಓಕೆ ಅಂದಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ. ಈ ಮಾತು ಕೇಳಿದ್ದೆ ತಡ ಬಂಪರ್ ಆಫರ್ ಗಿಟ್ಟಿಸಿಕೊಂಡ ರಿಷಬ್ ಶೆಟ್ಟಿ ಎಂಬ ಮಾತುಗಳು ಟಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ.