ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಬಿಗ್ ಸಕ್ಸಸ್ ನಂತರ ಇದೀಗ ರಿಷಭ್ ಶೆಟ್ಟಿ ಹಾಗೂ ತಂಡ ಕಾಂತಾರ ಪ್ರೀಕ್ವೆಲ್‌ಗೆ ಭರ್ಜರಿ ಸಿದ್ಧತೆ ನಡೆಸಿದೆ.
ಕಾಂತಾರ ಪ್ರೀಕ್ವೆಲ್ ಶೂಟಿಂಗ್‌ನಲ್ಲಿ ಯಾವುದೇ ವಿಘ್ನ ಬಾರದಿರಲಿ ಹಾಗೂ ಸಿನಿಮಾ ಉತ್ತಮವಾಗಿ ಮೂಡಿಬರಲಿ ಎಂದು ರಿಷಭ್ ಶೆಟ್ಟಿ ದೈವಗಳ ದರುಶನಕ್ಕೆ ಮುಂದಾಗಿದ್ದಾರೆ.
ಮಂಗಳೂರಿನ ವಜ್ರದೇಹಿ ಮಠದ ದೈವ ಕೋಲಕ್ಕೆ ರಿಷಭ್ ಭೇಟಿ ನೀಡಿದ್ದು, ಮೈಸಂದಾಯ ಕೋಲದಲ್ಲಿ ಭಾಗಿಯಾಗಿದ್ದಾರೆ. ಎಲ್ಲವೂ ಉತ್ತಮವಾಗಿ ನಡೆಯಲಿದೆ, ಧೈರ್ಯಗೆಡದೆ ಮುನ್ನಡೆಯುವಂತೆ ದೈವದ ಅಭಯ ಸಿಕ್ಕಿದೆ. ಏನೇ ಆದರೂ ಮುನ್ನುಗ್ಗಿ ಬೆನ್ನ ಹಿಂದೆ ನಾನಿದ್ದೇನೆ ಎನ್ನುವಂತೆ ಸನ್ನೆ ಮಾಡಿ ದೈವ ಆಶೀರ್ವಾದ ಮಾಡಿದೆ.