ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ರಾಮಮಂದಿರ ಉದ್ಘಾಟನೆಯಾಗಲಿದೆ. ಈ “ಪ್ರಾಣ ಪ್ರತಿಷ್ಠಾ” ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಪ್ರತಿಷ್ಠಾಪನಾ ಸಮಾರಂಭದ ನಂತರ, ರಾಮ ಮಂದಿರದಲ್ಲಿ ರಾಮಲಲಾ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ಕನ್ನಡದ ನಟರಾದ ನಿಖಿಲ್ ಕುಮಾರ್ ಮತ್ತು ರಿಷಬ್ ಅಯೋಧ್ಯೆಗೆ ಆಗಮಿಸಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ರಿಷಬ್ ಶೆಟ್ಟಿ ಕೂಡ ಅಯೋಧ್ಯೆಗೆ ಭೇಟಿ ನೀಡಿದ್ದರು. ಅವರು ತಮ್ಮ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗಿನ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಾಣ ಪ್ರತಿಷ್ಠಾನದ ಮೊದಲು ರಿಷಭ್ ಅನೇಕ ದೇವಾಲಯಗಳಿಗೆ ಭೇಟಿ ನೀಡಿದ್ದರು. ‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೂ ಮುನ್ನ.. ಹನುಮನ ದರ್ಶನ’ ಎಂದು ಅವರು ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಜತೆ ಅವರ ಪತ್ನಿಯೂ ಅಯೋಧ್ಯೆಗೆ ತೆರಳಿದ್ದಾರೆ.
View this post on Instagram
ರಿಷಬ್ ಈಗಾಗಲೇ ಆಹ್ವಾನ ಬಂದಿರುವುದಾಗಿ ಹೇಳಿಕೊಂಡಿದ್ದರು. “ಶ್ರೀರಾಮ ಜೈ ರಾಮ ಜೈ ಜಯ ರಾಮ… ಬಾಲ್ಯದಿಂದಲೂ ನಾವು ರಾಮನ ನಾಮವನ್ನು ಜಪಿಸುತ್ತಾ, ರಾಮನ ಪ್ರೀತಿಯನ್ನು ಹಾಡುತ್ತಾ ಮತ್ತು ಅವರ ಆದರ್ಶ ಜೀವನದ ಬಗ್ಗೆ ನಮ್ಮ ಹಿರಿಯರಿಂದ ಕಥೆಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಇಂದು ಆ ಶ್ರೀರಾಮ ತಾನು ಮಗುವಾಗಿ ಆಡಿದ, ಪ್ರಭುವಾಗಿ ಆಳಿದ ಆ ಅಯೋಧ್ಯೆಗೆ ಬರುವಂತೆ ಕರೆ ಕಳಿಸಿದ್ದಾನೆ. ಇದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ! ಶ್ರೀರಾಮನಿಗೆ ಜಯವಾಗಲಿ, ಅಯೋಧ್ಯೆಗೆ ಜಯವಾಗಲಿ- ರಿಷಬ್ಶೆಟ್ಟಿ ” ಎಂದು ಸೋಷಿಯಲ್ ಮೀಡಿಯಾದಲ್ಲಿ ರಿಷಬ್ ಬರೆದುಕೊಂಡಿದ್ದರು.