ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಚೇತನ್ ರಿಷಭ್ ಶೆಟ್ಟಿ ವಿರುದ್ಧ ಮಾತನಾಡಿದ್ದು, ಭೂತಕೋಲ ಹಿಂದೂ ಸಂಸ್ಕೃತಿ ಹೌದು-ಅಲ್ಲ ವಿಷಯದ ಮೇಲೆ ಚರ್ಚೆ ಆರಂಭವಾಗಿದೆ.
ಚೇತನ್ ಅವರ ಮಾತಿಗೆ ರಿಷಭ್ ಶೆಟ್ಟಿ ನೋ ಕಮೆಂಟ್ಸ್ ಎಂದು ಪ್ರತಿಕ್ರಿಯೆ ನೀಡಿ ಸುಮ್ಮನಾಗಿದ್ದರು. ಇಷ್ಟಕ್ಕೇ ಬಿಡದ ಚೇತನ್ ಇದೀಗ ಮತ್ತೆ ರಿಷಭ್ ಅವರನ್ನು ಕೆಣಕಿದ್ದು, ನೋ ಕಮೆಂಟ್ಸ್ ಎಂದು ಎಸ್ಕೇಪ್ ಆಗುವುದು ಸರಿಯಲ್ಲ. ಸಿನಿಮಾ ಮಾಡಿರುವುದು ನೀವೇ ಹಾಗಾಗಿ ಉತ್ತರ ಕೊಡಬೇಕಾದ್ದು ನೀವೆ. ಈ ವಿಷಯ ಚರ್ಚೆ ಆಗಲೇಬೇಕು. ಹಿಂದೂ ಸಂಸ್ಕೃತಿ ಎಂದು ಹೇಳಿದಮೇಲೆ ಅದರ ಬಗ್ಗೆ ಮಾತು ಬೆಳೆಯಲೇಬೇಕು.
ತಪ್ಪು ಮಾಡುವುದು ಮನುಷ್ಯ ಸಹಜಗುಣ, ತಪ್ಪನ್ನು ತಿದ್ದಿಕೊಂಡು ಹೋಗಬೇಕೆ ಹೊರತು ಎಸ್ಕೇಪ್ ಆಗಬಾರದು. ಬುಡಕಟ್ಟು, ಅಲೆಮಾರಿ ಸಂಸ್ಕೃತಿಯನ್ನು ಎತ್ತಿಹಿಡಿದರೆ ಅದು ಕಾಂತಾರ ಸಿನಿಮಾ ಹಾಗೂ ಇಡೀ ನಮ್ಮ ದೇಶಕ್ಕೇ ಒಳ್ಳೆಯದಾಗುತ್ತದೆ. ರಿಷಭ್ ಸತ್ಯವನ್ನು ಎತ್ತಿ ಹಿಡಿದು ನಿಜ ಹೇಳುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ.