ಇಂಗ್ಲೆಂಡ್ ವಿರುದ್ದದ ಮ್ಯಾಚ್ ನಲ್ಲಿ ರಿಷಭ್​ ಪಂತ್​ಗೆ ಗಾಯ: ಮೈದಾನದಿಂದ ಹೊರ ನಡೆದ ವಿಕೆಟ್​ ಕೀಪರ್​!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ಹಾಗೂ 3ನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್​ ರಿಷಭ್ ಪಂತ್ ಅವರು ಗಾಯಕ್ಕೆ ಒಳಗಾಗಿದ್ದಾರೆ. ಸದ್ಯ ಪಂತ್ ಬದಲಿಗೆ ಧೃವ್ ಜುರೆಲ್ ಅವರು ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.

ತಂಡದ 34ನೇ ಓವರ್​ನಲ್ಲಿ ಜಸ್​ಪ್ರಿತ್ ಬೂಮ್ರಾ ಅವರು ಮಾಡಿದ ಬೌಲ್ ಅನ್ನು ಬ್ಯಾಟ್ಸ್​ಮನ್​ ಆಲಿ ಪೋಪ್ ಹೊಡೆಯಲು ವಿಫಲರಾದರು. ಬಾಲ್ ಲೆಗ್​ಸೈಡ್​ನಲ್ಲಿ ವೈಡ್ ಆಗಿದ್ದು ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಡೈವ್ ಮಾಡಿ ಬಾಲ್ ಅನ್ನು ಹಿಡಿದರು. ಈ ವೇಳೆ ಬಾಲ್ ಪಂತ್ ಅವರ ಎಡಗೈನ ತೋರುಬೆರಳಿಗೆ ಪ್ರಬಲವಾಗಿ ತಾಗಿದೆ.

ಇದರಿಂದ ತಕ್ಷಣ ರಿಷಭ್ ಪಂತ್ ಅವರು ನೋವಿನಿಂದ ಬಳಲುತ್ತಿದ್ದರು. ಕೂಡಲೇ ವೈದ್ಯಕೀಯ ತಂಡದವರು ಆಗಮಿಸಿ ಬೆರಳಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸದ್ಯ ಆಡಲು ಆಗದ ಕಾರಣ ಮೈದಾನದಿಂದ ರಿಷಭ್ ಪಂತ್ ಹೊರ ನಡೆದಿದ್ದಾರೆ. ಸದ್ಯ ಪಂತ್ ಬದಲಿಗೆ ಮೈದಾನಕ್ಕೆ ಧೃವ್ ಜುರೆಲ್ ಅವರು ಆಗಮಿಸಿದ್ದಾರೆ.

ಲಂಡನ್​ನ ಲಾರ್ಡ್ಸ್​ನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್​ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್​ ಸ್ಟೋಕ್ಸ್​ ಅವರು ಬ್ಯಾಟಿಂಗ್ ಆಯ್ಕೆ ಮಾಡಿದರು. ಇದರಿಂದ ಟೀಮ್ ಇಂಡಿಯಾ ಆಟಗಾರರು ಬೌಲಿಂಗ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!