ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಾಂತಾರ’ ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿದೆ. ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರ ಅವರನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ. ಅವರು ಹಿಂದಿಯ ‘ಕೌನ್ ಬನೇಗಾ ಕರೋಡ್ಪತಿ’ ಶೋನ ಭಾಗ ಆಗಿದ್ದಾರೆ.
ಈ ವೇಳೆ ರಿಷಬ್ ಲುಂಗಿ ಕಟ್ಟೋದು ನೋಡಿ ಅಮಿತಾಭ್ ಬಚ್ಚನ್ ಶಾಕ್ ಆಗಿದ್ದಾರೆ. ಅದೊಂದು ಕಲೆ ಎಂದು ಹೊಗಳಿದ್ದಾರೆ. ರಿಷಬ್ ಅವರು ಅಮಿತಾಭ್ ಬಚ್ಚನ್ಗೆ ವಿಶೇಷ ಉಡುಗೊರೆಯನ್ನು ಕೂಡ ನೀಡಿದ್ದಾರೆ.
ರಿಷಭ್ ಧರಿಸಿದ ರೀತಿಯದ್ದೇ ಲುಂಗಿಯೊಂದನ್ನು ಅಮಿತಾಬ್‌ಗೆ ಗಿಫ್ಟ್ ಆಗಿ ರಿಷಭ್ ನೀಡಿದ್ದಾರೆ. ಅದನ್ನು ನೋಡಿ ಅಮಿತಾಭ್ ಖುಷಿ ಪಟ್ಟಿದ್ದಾರೆ. ಲುಂಗಿ ಕಟ್ಟೋದು ಒಂದು ಕಲೆ, ಅದನ್ನು ಮೊದಲು ಕಲೀತಿನಿ ನಂತರ ಇದನ್ನು ಹಾಕಿಕೊಳ್ಳುತ್ತೇನೆ. ಸರಿಯಾಗಿ ಕಟ್ಟಿಕೊಳ್ಳದೇ ಬಿಚ್ಚಿಹೋದ್ರೆ ವಿಷಯ ಇಂಟರ್‌ನ್ಯಾಷನಲ್ ಆಗಿಬಿಡುತ್ತದೆ ಎಂದು ತಮಾಷೆ ಮಾಡಿದ್ದಾರೆ.
ಕರೋಡ್ಪತಿ ಕಾರ್ಯಕ್ರಮದಲ್ಲಿ ಬಿಗ್‌ಬಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ರಿಷಭ್ ಶೆಟ್ಟಿ!
