ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಪ್ರದಾಯ, ಆಚರಣೆ, ಪರಂಪರೆ, ಇವೆಲ್ಲವೂ ಭಾರತದ ಸಂಸ್ಕೃತಿ. ಕೇವಲ ಇಲ್ಲಿ ಮಾತ್ರವಲ್ಲ ಭಾರತೀಯ ಪ್ರಜೆಗಳು ವಿಶ್ವದಾದ್ಯಂತ ಎಲ್ಲೇ ವಾಸವಿದ್ದರೂ ಅಲ್ಲೆಲ್ಲಾ ನಮ್ಮ ಸಂಪ್ರದಾಯಗಳು ಆಚರಣೆಯಲ್ಲಿರುತ್ತವೆ. ಜಗತ್ತಿನಾದ್ಯಂತ ಭಾರತದ ಸಂಸೃತಿಗೆ ಗೌರವ ಇದೆ. ಇತರೆ ದೇಶಗಳಲ್ಲಿ ವಾಸ ಮಾಡುತ್ತಿರುವ ಭಾರತೀಯರು ಅಲ್ಲೆಲ್ಲಾ ನಮ್ಮ, ಆಚಾರ-ವಿಚಾರಗಳನ್ನು ಪಸರಿಸುತ್ತಾರೆ. ಅಂತೆಯೇ ಬ್ರಿಟನ್ ಪ್ರಧಾನಿ ರೇಸ್‌ನಲ್ಲಿರುವ ಭಾರತ ಮೂಲದ ರಿಷಿ ಸುನಕ್ ನಮ್ಮ ಸಂಪ್ರದಾಯವನ್ನು ಅಲ್ಲೂ ಬೆಳಗಿಸಿದ್ದಾರೆ.
ಗೋಮಾತೆಗೆ ರಿಷಿ ಸುನಕ್ ಮತ್ತು ಅವರ ಪತ್ನಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಂಡನ್‌ನಲ್ಲಿ ಗೋಮಾತೆ ಕಾಲಿಗೆ ಕುಂಕುಮ ಹಚ್ಚಿ, ಮಂಗಳಾರತಿ ಮಾಡಿದ್ದಾರೆ. ನಮ್ಮ ಸಂಸ್ಕೃತಿಯನ್ನು ನೋಡಲು ತುಂಬಾ ಸಂತೋಷವಾಗುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
Gau Mata Pooja by Rishi Sunak and his wife in UK .. so nice to see our rich culture at display 🙏 pic.twitter.com/UhcFhagrjG
— Viक़as (@VlKASPR0NAM0) August 22, 2022