ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಅಪಘಾತದಲ್ಲಿ ಕರ್ತವ್ಯ ನಿರತ ಇನ್ಸ್‌ಪೆಕ್ಟರ್, ಕಾನ್ ಸ್ಟೇಬಲ್ ಸಾವನ್ನಪ್ಪಿರುವ ಘಟನೆ ಕಡಪ ಜಿಲ್ಲೆಯಲ್ಲಿ ನಡೆದಿದೆ. ಕಡಪ ಉಪನಗರ ಇಸ್ಕಾನ್ ಸರ್ಕಲ್ ನಲ್ಲಿ ಈ ದುರ್ಘಟನೆ ನಡೆದಿದೆ.
ಎದುರಿಗೆ ಬರುತ್ತಿದ್ದ ಎರಡು ಲಾರಿಗಳ ನಡುವೆ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಪಕ್ಕದಲ್ಲಿ ನಿಂತಿದ್ದ ನಿರೀಕ್ಷಕರ ಕಾರಿನ ಮೇಲೆ ಲಾರಿ ಬಿದ್ದಿದೆ. ಇದರಿಂದ ಕರ್ತವ್ಯದಲ್ಲಿದ್ದ ಮೋಟಾರು ವಾಹನ ನಿರೀಕ್ಷಕ ಹಾಗೂ ಕಾನ್‌ಸ್ಟೆಬಲ್ ಸಾವನ್ನಪ್ಪಿದ್ದಾರೆ.
ನಿರೀಕ್ಷಕ ಶಿವಪ್ರಸಾದ್ ಮತ್ತು ಕಾನ್‌ಸ್ಟೆಬಲ್ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.